ಸುಳ್ಯ : ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವಿವಾಹಿತ ಯುವತಿ ಆತ್ಮಹತ್ಯೆ
ಸುಳ್ಯ: ಗಾಂಧಿನಗರ ಕೆರೆಮೂಲೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಮೀನ ಎಂಬವರ ಮಗಳು ಆಯೀಶಾ ಎಂಬಾಕೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 6ರಂದು ಸಂಜೆ ವರದಿಯಾಗಿದೆ.
ಸುಳ್ಯ ಬೆಟ್ಟಂಪ್ಪಾಡಿ ಜಟ್ಟಿಪಳ್ಳ ಮುಂತಾದ ಕಡೆಗಳಲ್ಲಿ ಈ ಹಿಂದೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಮೀನ ಕುಟುಂಬ ಇತ್ತೀಚೆಗೆ ಕೆರೆಮೂಲೆ ಬಳಿ ಬಾಡಿಗೆ ಮನೆ ಮಾಡಿ ವಾಸಿಸುತ್ತಿದ್ದರು.
ನಿನ್ನೆ ಸಂಜೆ ಪ್ಯಾನ್ ಗೇ ನೇಣು ಬಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಮನೆಯವರು ಕೂಡಲೇ ಅವರನ್ನು ಹಗ್ಗದಿಂದ ಕೆಳಗೆ ಇಳಿಸಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದುರು.
ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದಾಗ ಅಷ್ಟರಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಆಯಿಷಾರಿಗೆ ಕಳೆದ ವರ್ಷ ಕಾಸರಗೋಡು ಮಂಙಪಾರೆಯ ಯುವಕನೊಂದಿಗೆ ವಿವಾಹಗಿದ್ದು ಯುವಕ ವಿದೇಶಿದಲ್ಲಿರುವುದೆಂದು ತಿಳಿದು ಬಂದಿದೆ.
ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.





