ವಿವಾದಾತ್ಮಕ ಪೋಸ್ಟ್: ಮಹಾರಾಷ್ಟ್ರ ಏಕೀಕರಣ ಸಮಿತಿ ಯುವ ಘಟಕ ಅಧ್ಯಕ್ಷನ ವಿರುದ್ಧ ಎಫ್ಐಆರ್
ಬೆಳಗಾವಿ: ಬೆಳಗಾವಿ, ಬೀದರ, ಬಾಲ್ಕಿ, ಕಾರವಾರ, ನಿಪ್ಪಾಣಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿದ ಗ್ರಾಫಿಕ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ ಯುವ ಘಟಕ ಅಧ್ಯಕ್ಷ ಶುಭಂ ಶೇಳಕೆ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮೇ 1 ಮಹಾರಾಷ್ಟ್ರ ದಿನ ನಿಮಿತ್ತ ಸಾಮಾಜಿಕ ಜಾಲತಾಣದಲ್ಲಿ ಬೆಳಗಾವಿ ಗಡಿ ಭಾಗದ ವಿವಾದಿತ ನಕ್ಷೆ ತಯಾರಿಸಿ ಅಪ್ಲೋಡ್ ಮಾಡಿದ್ದು, ಇದು ಕನ್ನಡಿಗರನ್ನು ಕೆಣಕಿಸಿತ್ತು. ಈ ಬಗ್ಗೆ ಕರವೇ ಕಾರ್ಯಕರ್ತ ವಿನಾಯಕ ಭೋವಿ ನೀಡಿದ ದೂರಿನ ಮೇರೆಗೆ ಮಾಳಮಾರುತಿ ಠಾಣೆಯಲ್ಲಿ ಶುಭಂ ಶೇಳಕೆ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಐಟಿ ಆ್ಯಕ್ಟ್ 2000(U/s-66), ಐಪಿಸಿ ಸೆಕ್ಷನ್ 1860(U/s-153B) ಅಡಿ ದೂರು ದಾಖಲಿಸಲಾಗಿದೆ.




