March 20, 2026

ಮದುವೆ ಮೆರವಣಿಗೆಯಲ್ಲಿ ಮಿನಿ ಲಾರಿ ಹಾಯ್ದು ಮೂವರು ಮೃತ್ಯು

0
image_editor_output_image-1859751074-1651828329825.jpg

ಕಲಬುರಗಿ: ತಾಲ್ಲೂಕಿನ ಕಡತಾಲ ತಾಂಡಾದಲ್ಲಿ ಮದುವೆ ಮೆರವಣಿಗೆಯಲ್ಲಿ ಡಿ.ಜೆ. ಇದ್ದ ಮಿನಿ ಲಾರಿ ಹಾಯ್ದು ಮೂವರು ಮೃತಪಟ್ಟ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ.

ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, 8ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಮೇದಕ್ ತಾಂಡಾದ ಸುಗುಣಿಬಾಯಿ (40), ತೆಲಂಗಾಣದ ವಿಜ್ಜಿಬಾಯಿ ರಾಠೋಡ (30), ಕುಮಾರನಾಯಕ ರಾಠೋಡ (35) ಮೃತಪಟ್ಟವರು.

ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ವಾತಾವರಣ ಆವರಿಸಿತ್ತು. ಗುರುವಾರ ಬೆಳಿಗ್ಗೆ ವರನ ಮನೆಯಲ್ಲಿ ಮದುವೆ ನಡೆಯಬೇಕಿತ್ತು. ಮೆರವಣಿಗೆಗೆ ಪಕ್ಕದ ತೆಲಂಗಾಣದಿಂದ ಡಿ.ಜೆ ತರಿಸಲಾಗಿತ್ತು. ವಧುವಿನ ಮೆರವಣಿಗೆಯಲ್ಲಿ ವಾಹನದ ಮುಂದೆ ನೃತ್ಯ ಮಾಡುತ್ತ ಮನೆ ಬರುತ್ತಿದ್ದರು. ಈ ವೇಳೆ ಮಿನಿ ಲಾರಿ ಏಕಾಏಕಿ ನೃತ್ಯ ಮಾಡುತಿದ್ದವರ ಮೇಲೆ ಹರಿದಿದೆ ಎಂದು ತಿಳಿದು ಬಂದಿದೆ.

ಗಾಯಗೊಂಡವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಮುಧೋಳ ಪೊಲೀಸ್ ಇನ್‌ಸ್ಪೆಕ್ಟರ್‌ ಸಂದೀಪಸಿಂಗ್ ಮುರಗೋಡ ಹಾಗೂ ಪಿಎಸ್‌ಐಗಳಾದ ಚಿದಾನಂದ ಕಾಶಪ್ಪಗೋಳ, ಇಂದಿರಾಬಾಯಿ ಪಾಟೀಲ ಸ್ಥಳಕ್ಕೆ ಭೇಟಿ ನೀಡಿದರು.

Leave a Reply

Your email address will not be published. Required fields are marked *

error: Content is protected !!