February 1, 2026

ಐಪಿಎಲ್ ಬ್ಯಾನ್ ಮಾಡಿ, ದೇಶಕ್ಕಾಗಿ ಆಡಲು ಕಲಿಯಿರಿ: 
ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ

0
Screenshot_2021-11-01-14-09-04-94_680d03679600f7af0b4c700c6b270fe7.jpg

ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ಸೋಲಿನ ಬಳಿಕ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಿಟ್ಟಾಗಿದ್ದಾರೆ. ದೇಶದಲ್ಲಿ ಐಪಿಎಲ್ ಅನ್ನು ಬ್ಯಾನ್ ಮಾಡಿ ಹಾಗೂ ದೇಶಕ್ಕಾಗಿ ಆಡಲು ಕಲಿಯಿರಿ ಅನ್ನೋ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.

ದುಬೈ ಇಂಟರ್ ನ್ಯಾಷನಲ್ ಗ್ರೌಂಡ್ ನಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ಕೊಹ್ಲಿ ಟೀಮ್ ಹೀನಾಯವಾಗಿ ಸೋತಿದೆ. ಇದರಿಂದ ಆಕ್ರೋಶಗೊಂಡಿರುವ ಫ್ಯಾನ್ಸ್ ಸಾಮಾಜಿಕ ಮಾಧ್ಯಮಗಳಲ್ಲಿ ಐಪಿಎಲ್ ನಿಷೇಧಕ್ಕೆ ಆಗ್ರಹಿಸಿದ್ದಾರೆ.

ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೆ ವಿಶ್ವದ ಅತಿ ದೊಡ್ಡ ಲೀಗ್ ಆಯೋಜಿಸಿ ಏನು ಪ್ರಯೋಜನ ಅಂತಾ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!