November 7, 2026

ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ  ಮೊಹಮ್ಮದ್ ಶಮಿ

0
image_editor_output_image-237541987-1793992738166

ಬೆಂಗಳೂರು: ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿ ಎನ್ನುವಂತೆ ಟೀಮ್ ಇಂಡಿಯಾದ ಅನುಭವಿ ಹಾಗೂ ಮಾರಕ ವೇಗದ ಬೌಲರ್ ಮೊಹಮ್ಮದ್ ಶಮಿ  ಅವರು ಟೆಸ್ಟ್ ಕ್ರಿಕೆಟ್‌ಗೆ  ದಿಢೀರ್ ನಿವೃತ್ತಿ ಘೋಷಿಸಿದ್ದಾರೆ:

“‘ನಾನು ಬಿಳಿ ಜರ್ಸಿಯನ್ನು ತೊರೆಯುತ್ತಿರಬಹುದು, ಆದರೆ ಅದಕ್ಕೆ ಬೆಸೆದುಕೊಂಡಿರುವ ನೆನಪುಗಳನ್ನು ಎಂದಿಗೂ ತೊರೆಯುವುದಿಲ್ಲ” ಎಂದು ಅತ್ಯಂತ ಭಾವುಕವಾಗಿ ಬರೆದುಕೊಂಡು ತಮ್ಮ ಸುದೀರ್ಘ ರೆಡ್-ಬಾಲ್ ಕ್ರಿಕೆಟ್ ಪಯಣಕ್ಕೆ ವಿದಾಯ ಹೇಳಿದ್ದಾರೆ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಭಾವನಾತ್ಮಕ ನಿವೃತ್ತಿ ಸಂದೇಶವನ್ನು ಹಂಚಿಕೊಂಡಿರುವ ಮೊಹಮ್ಮದ್ ಶಮಿ, ಟೆಸ್ಟ್ ಕ್ರಿಕೆಟ್ ತಮಗೆ ನೀಡಿದ ಕೊಡುಗೆ ಹಾಗೂ ತಮ್ಮ ಕಷ್ಟ-ಸುಖದ ಹಾದಿಯಲ್ಲಿ ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಟೀಮ್‌ ಇಂಡಿಯಾ ಪರವಾಗಿ 64 ಟೆಸ್ಟ್‌ ಪಂದ್ಯವಾಡಿರುವ ಮೊಹಮದ್‌ ಶಮಿ, 229 ವಿಕೆಟ್‌ ಉರುಳಿಸಿದ್ದಾರೆ.6 ಬಾರಿ 5 ವಿಕೆಟ್‌ ಹಾಗೂ 12 ಬಾರಿ 4 ವಿಕೆಟ್‌ ಸಾಧನೆ ಮಾಡಿದ್ದಾರೆ. ಟೆಸ್ಟ್‌ನಲ್ಲಿ 11,515 ಎಸೆತ ಹಾಕಿರುವ ಶಮಿ 364 ಮೇಡನ್‌ ಓವರ್‌ ಎಸೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!