December 15, 2025

ಕಾಸರಗೋಡು: ಆಟೋರಿಕ್ಷಾ- ಮಿನಿ ಲಾರಿ ನಡುವೆ ಅಪಘಾತ, ಪುತ್ರ ಮೃತಪಟ್ಟು, ತಂದೆ ಗಂಭೀರ

0
image_editor_output_image1846804889-1651302391685.jpg

ಕಾಸರಗೋಡು: ಆಟೋರಿಕ್ಷಾ ಮತ್ತು ಮಿನಿ ಲಾರಿ ನಡುವೆ ಉಂಟಾದ ರಸ್ತೆ ಅಪಘಾತದಲ್ಲಿ ಪುತ್ರ ಮೃತಪಟ್ಟು, ತಂದೆ ಗಂಭೀರ ಗಾಯಗೊಂಡ ಘಟನೆ ಇಂದು ಬೆಳಗ್ಗೆ ರಾಜ್ಯ ಹೆದ್ದಾರಿಯ ಉದುಮದಲ್ಲಿ ನಡೆದಿದೆ.

ಕಾಸರಗೋಡು ಅಣಂಗೂರು ಟಿಪ್ಪು ನಗರದ ಬಿ.ಎ.ಅಮೀರ್(26) ಮೃತ ಪಟ್ಟವರು. ತಂದೆ ಮುಹಮ್ಮದ್ ಕುಂಞಿ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಬ್ಬರು ತರಕಾರಿ ಹೋಲ್ ಸೇಲ್ ಮಾರಾಟ ನಡೆಸುತ್ತಿದ್ದು, ಇಂದು ಬೆಳಗ್ಗೆ ತರಕಾರಿ ತರಲೆಂದು ಆಟೋ ರಿಕ್ಷಾದಲ್ಲಿ ಕಾಞಂಗಾಡ್ ಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಮಿನಿ ಲಾರಿ ಢಿಕ್ಕಿ ಹೊಡೆದ ರಭಸಕ್ಕೆ ನಜ್ಜುಗುಜ್ಜಾದ ಆಟೋ ರಿಕ್ಷಾದಲ್ಲಿ ಸಿಲುಕಿದ್ದ ಇಬ್ಬರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಹೊರ ತೆಗೆದು ಆಸ್ಪತ್ರೆಗೆ ತಲಪಿಸಿದರೂ ಅಮೀರ್ ಆಗಲೇ ಕೊನೆಯುಸಿರೆಳೆದಿದ್ದರು.

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಿದೆ.

Leave a Reply

Your email address will not be published. Required fields are marked *

error: Content is protected !!