March 19, 2026

ಮಂಗಳೂರು: ಮಸೀದಿಗೆ ನುಗ್ಗಿ ಮಹಿಳೆಯರ ಜತೆ ಅಸಭ್ಯ ವರ್ತನೆ: ಆರೋಪಿ ಸುಜಿತ್ ಶೆಟ್ಟಿ ಬಂಧನ

0
image_editor_output_image-1412745302-1651305909529

ಮಂಗಳೂರು: ಮಸೀದಿಯಲ್ಲಿ ಮಹಿಳೆಯರು ನಮಾಜ್ ಮಾಡುವ ಕೊಠಡಿಗೆ‌ ನುಗ್ಗಿ ಮಹಿಳೆಯರ ಅಸಭ್ಯವಾಗಿ ವರ್ತಿಸಿದ ಘಟನೆ ತೊಕ್ಕೊಟ್ಟಿನ ಹುದಾ ಜುಮ್ಮಾ ಮಸೀದಿಯಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಾರ್ಕಳ ತಾಲೂಕಿನ ನಿಟ್ಟೆ ನಿವಾಸಿ ಸುಜಿತ್ ಶೆಟ್ಟಿ(26) ಎನ್ನಲಾಗಿದೆ.

ತೊಕ್ಕೊಟ್ಟಿನ ಹುದಾ ಜುಮ್ಮಾ ಮಸೀದಿಯಲ್ಲಿ ಲೈಲಾತುಲ ಖದರ್ ನ ರಾತ್ರಿ ವಿಶೇಷ ಕಾರ್ಯಕ್ರಮವನ್ನು ಎ.28 ರಂದು ಏರ್ಪಡಿಸಲಾಗಿದ್ದು, ಈ ವೇಳೆ ಆರೋಪಿ ಸುಜಿತ್ ಮಸೀದಿಯಲ್ಲಿ ಮಹಿಳೆಯರು ನಮಾಜ್ ಮಾಡುವ ಕೊಠಡಿಗೆ‌ ನುಗ್ಗಿ ಮಹಿಳೆಯರ ಕೈಹಿಡಿದು ಎಳೆದು, ಮಾನಹಾನಿ‌ ಮಾಡಿದ್ದಾನೆ ಎಂದು‌ ದೂರು ದಾಖಲಾಗಿದೆ.

ಮಹಿಳೆ ನೀಡಿದ ದೂರಿನ ಮೇರೆಗೆ ಉಳ್ಳಾಲ ಪೋಲಿಸ್ ಠಾಣೆಯಲ್ಲಿ ಸೆಕ್ಷನ್ 354 ರಂತೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!