March 19, 2026

ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಶಾಂತಿ ಕದಡುವ ಪೋಸ್ಟ್: ಗೃಹರಕ್ಷಕ ದಳದ ಸಿಬ್ಬಂದಿ ಅಮಾನತು

0
image_editor_output_image-1579915194-1651034209910

ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕ ಶಾಂತಿ ಕದಡುವ ಸಂದೇಶ ರವಾನೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಪುತ್ತೂರು ಗೃಹರಕ್ಷಕದಳದ ಸಿಬ್ಬಂದಿಯೊಬ್ಬರನ್ನು ಶಾಸಕ ಸಂಜೀವ ಮಠಂದೂರು ಅವರ ಸೂಚನೆಯಂತೆ ಗೃಹರಕ್ಷಕ ಇಲಾಖೆ ಅಮಾನತು ಮಾಡಿದೆ.

ಪುತ್ತೂರು ಆರ್‌ಟಿಒದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿ ಸಲಾವುದ್ದೀನ್ ನೌಶಾದ್ ಎಂಬವರನ್ನು ಅಮಾನತುಗೊಂಡವರು.

ವಾಟ್ಸಪ್‌ನಲ್ಲಿ ಬಂದಿರುವ ಸಾರ್ವಜನಿಕ ಶಾಂತಿ ಕದಡುವ ರೀತಿಯಲ್ಲಿ ಸಂದೇಶವನ್ನು ರವಾನೆ ಮಾಡಿದ ಹಿನ್ನೆಲೆಯಲ್ಲಿ ಆತನ ವಿರುದ್ದ ದೂರುಗಳು ಬಂದಿತ್ತು.

ಶಾಸಕ ಸಂಜೀವ ಮಠಂದೂರು ಅವರ ಸೂಚನೆಯಂತೆ ಗೃಹರಕ್ಷಕದಳದ ಕಮಾಡೆಂಡ್ ಡಾ. ಮುರಳೀಧರ ಚೂಂತಾರು ಅವರು ಸಲಾವುದ್ದೀನ್ ನೌಶಾದ್ ಅವರನ್ನು ಅಮಾನತಿನಲ್ಲಿಟ್ಟು ಆತನನ್ನು ವಿಚಾರಿಸಿ ವರದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!