March 19, 2026

ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮದ ಆರೋಪಿ ಜತೆ ಡಿಕೆಶಿ ಇರುವ ಫೋಟೋ ಪೋಸ್ಟ್ ಮಾಡಿದ ಬಿಜೆಪಿ: ನಿಮ್ಮ ಪಕ್ಷದ ನಾಯಕರು ಫೋಟೋದಲ್ಲಿ ಇದ್ದಾರೇ ಉಚ್ಚಾಟಿಸುತ್ತೀರಾ? ಕಾಂಗ್ರೆಸ್ ಟ್ವೀಟ್

0
image_editor_output_image-954746426-1651016952258

ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾತನಾಡುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

2018ರಲ್ಲಿ ಡಿ.ಕೆ. ಶಿವಕುಮಾರ್ ಅವರು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾಗ ಅವರನ್ನು ಭೇಟಿಯಾದ ಹೈದರಾಬಾದ್ ಕರ್ನಾಟಕದ ನರ್ಸಿಂಗ್ ಕಾಲೇಜು ಮಾಲೀಕರ ನಿಯೋಗದಲ್ಲಿ ದಿವ್ಯಾ ಹಾಗರಗಿ ಸಹ ಇದ್ದರು. ಅದೇ ಚಿತ್ರದ ಅರ್ಧ ಭಾಗವನ್ನು ಬಿಜೆಪಿ ಕರ್ನಾಟಕ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಲಾಗಿತ್ತು.

ಈ ಬಗ್ಗೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಕರ್ನಾಟಕ ಕಾಂಗ್ರೆಸ್, ಡಿ.ಕೆ. ಶಿವಕುಮಾರ್ ಅವರೊಂದಿಗೆ ಕೇವಲ ದಿವ್ಯಾ ಹಾಗರಗಿಯ ಫೋಟೋ ಮಾತ್ರವಲ್ಲ, ನಿಮ್ಮ ಪಕ್ಷದ ಬಹುತೇಕ ನಾಯಕರ ಫೋಟೋಗಳೂ ಇವೆ ಎಂದಿದೆ.ಹಾಗೆಂದ ಮಾತ್ರಕ್ಕೆ ಅವರೆಲ್ಲ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಾರೆ ಎಂದು ಉಚ್ಛಾಟಿಸುವಿರಾ!? ನಿಮ್ಮ ನಾಯಕರೇ ಆಕೆಯ ಮನೆಯನ್ನು ಹುಡುಕಿಕೊಂಡು ಹೋಗಿ ಆತಿಥ್ಯ ಸ್ವೀಕರಿಸಿದ್ದು ಯಾವ ಕಾರಣಕ್ಕೆ, ಆಕೆಯ ಬಂಧನವಾಗದಿವುದು ಏಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Leave a Reply

Your email address will not be published. Required fields are marked *

error: Content is protected !!