March 19, 2026

ಜಾರ್ಖಂಡ್‌ ಸರಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮಹೇಂದ್ರ ಸಿಂಗ್ ಧೋನಿ ಪತ್ನಿ

0
image_editor_output_image1603187522-1650956883478.jpg

ರಾಂಚಿ: ಜಾರ್ಖಂಡ್‌ ರಾಜ್ಯದಲ್ಲಿ ನಿರಂತರ ಲೋಡ್ ಶೆಡ್ಡಿಂಗ್‌ನಿಂದಾಗಿ ಸಾಮಾನ್ಯ ಜನರು ಮಾತ್ರವಲ್ಲದೇ ಶ್ರೀಮಂತರು ಕೂಡ ಸಮಸ್ಯೆ ಎದುರಿಸುವಂತಾಗಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಧೋನಿ ಅವರು ವಿದ್ಯುತ್ ಸಮಸ್ಯೆಯಿಂದ ತೀವ್ರವಾಗಿ ಬೇಸರಗೊಂಡಿದ್ದಾರೆ

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸಾಕ್ಷಿ ಸಿಂಗ್ ಅವರು ಜಾರ್ಖಾಂಡ್ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಾರ್ಖಂಡ್‌ನ ತೆರಿಗೆ ಪಾವತಿದಾಳಾಗಿರುವ ನನಗೆ ಜಾರ್ಖಂಡ್‌ನಲ್ಲಿ ಇಷ್ಟು ವರ್ಷಗಳಿಂದ ವಿದ್ಯುತ್ ಸಮಸ್ಯೆ ಏಕೆ ಇದೆ ಎಂದು ತಿಳಿಯಲು ಬಯಸುತ್ತೇನೆ ಎಂದು ಸಾಕ್ಷಿ ಧೋನಿ ಅವರು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!