ಕಾಲುವೆಯಲ್ಲಿ ಆಟವಾಡಲು ಹೋಗಿದ್ದ ವೇಳೆ ಇಬ್ಬರು ಬಾಲಕಿಯರು ನೀರಿಗೆ ಜಾರಿಬಿದ್ದು ಮೃತ್ಯು
ರಾಯಚೂರು: ಕಾಲುವೆಯಲ್ಲಿ ಆಟವಾಡಲು ಹೋಗಿದ್ದ ವೇಳೆ ಇಬ್ಬರು ಬಾಲಕಿಯರು ನೀರಿಗೆ ಜಾರಿಬಿದ್ದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಮಿರ್ಜಾಪುರ ಗ್ರಾಮದಲ್ಲಿ ಸಂಭವಿಸಿದೆ.
8 ನೇ ತರಗತಿ ವಿದ್ಯಾರ್ಥಿನಿ ಇಂದು(14), ಏಳನೇ ತರಗತಿ ಓದುತ್ತಿದ್ದ ಸುಜಾತ(13) ಮೃತ ಬಾಲಕಿಯರು.
ಈ ಇಬ್ಬರು ಬಾಲಕಿಯರು ಗ್ರಾಮದಲ್ಲಿ ಬಳಿ ಹಾದು ಹೋಗಿರುವ ಕಾಲುವೆಯಲ್ಲಿ ಆಟವಾಡಲು ತೆರಳಿದ್ದ ವೇಳೆ ಕಾಲು ಜಾರಿ ಬಿದ್ದಿದ್ದು, ಈ ವೇಳೆ ಈಜಲು ಬಾರದೆ ಇಬ್ಬರೂ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಇಡಪಾನೂರು ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ. ನೀರಲ್ಲಿ ಬಿದ್ದ ಬಾಲಕಿಯರ ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.




