ರಾಮನವಮಿ ಆಚರಣೆ ವೇಳೆ ಗಲಭೆ ಪ್ರಕರಣ: 175 ಆರೋಪಿಗಳ ಬಂಧನ
ಭೋಪಾಲ್: ರಾಮನವಮಿ ಆಚರಣೆ ವೇಳೆ ಗಲಭೆ ಎಬ್ಬಿಸಿದ ಆರೋಪದ ಮೇರೆಗೆ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ಇದುವರೆಗೆ 175 ಆರೋಪಿಗಳನ್ನು ಬಂಧಿಸಲಾಗಿದೆ. 64 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಖಾರ್ಗೋನ್‌ನಲ್ಲಿ ಕರ್ಫ್ಯೂವನ್ನು ಭಾನುವಾರ ಕೊಂಚ ಸಡಿಲಿಸಲಾಗಿತ್ತು. ಬೆಳಗ್ಗೆ 8ರಿಂದ ಸಂಜೆ 5ರವರೆಗೆ 9 ಗಂಟೆ ಕಾಲ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ, ಇನ್ನೆರಡು ದಿನಗಳ ವರೆಗೆ ನೈಟ್ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಮುಂದುವರಿಸಲು ಪೊಲೀಸರು ತೀರ್ಮಾನಿಸಿದ್ದಾರೆ.




