ಖಾಸಗಿ ಬಸ್ ನಿಲ್ದಾಣದಲ್ಲಿ ಬ್ಯಾಗ್ ನಲ್ಲಿ ಒಂದು ವಾರದ ಗಂಡುಮಗು ಪತ್ತೆ
ಹನೂರು: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬ್ಯಾಗ್ ಒಂದರಲ್ಲಿ ಒಂದು ವಾರದ ಗಂಡುಮಗು ಪತ್ತೆಯಾಗಿದೆ
ಭಾನುವಾರ ಸಂಜೆ 7 ಗಂಟೆಯ ಸಮಯದಲ್ಲಿ ಬಸ್ ನಿಲ್ದಾಣದ ಕುರ್ಚಿಗಳ ಮೇಲೆ ಬ್ಯಾಗೊಂದು ಇರುವುದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಬ್ಯಾಗನ್ನು ತೆರೆದು ಪರಿಶೀಲಿಸಿದಾಗ ಗಂಡು ಮಗು ಪತ್ತೆಯಾಗಿದೆ.
ಗಂಡು ಮಗು ಪತ್ತೆಯಾಗಿರುವ ಸುದ್ದಿ ಪಟ್ಟಣದಾದ್ಯಂತ ತಿಳಿಯುತ್ತಿದ್ದಂತೆ ಸಾರ್ವಜನಿಕರು ತಂಡೋಪತಂಡವಾಗಿ ಠಾಣೆಗೆ ಆಗಮಿಸಿ ಮಗುವನ್ನು ಪಡೆಯಲು ಮುಗಿಬಿದ್ದರು.




