ಕ್ಷುಲಕ ಕಾರಣಕ್ಕೆ ಜಗಳ: ಚಾಕುವಿನಿಂದ ಇರಿದು ಯುವಕನ ಕೊಲೆ
ಬೆಂಗಳೂರು: ಕರಗ ನೋಡಲು ಸ್ನೇಹತರೊಂದಿಗೆ ಬಂದಿದ್ದ ಯುವಕನನ್ನು ಕ್ಷುಲಕ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಶನಿವಾರ ರಾತ್ರಿ ಕೆಂಗೇರಿ ರೈಲ್ವೆ ನಿಲ್ದಾಣದ ಸಮೀಪದ ಹರ್ಷ ಲೇಔಟ್‌ನಲ್ಲಿ ನಡೆದಿದೆ.
ಇತ್ತೀಚೆಗೆ ಜೆಜೆನಗರದಲ್ಲಿ ಬೈಕ್ ತಾಗಿತೆಂದು ಕೋಪಗೊಂಡ ಯುವಕರ ಗುಂಪು ಚಂದ್ರು ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಮಾಸುವ ಮುನ್ನವೇ ಅಂತದ್ದೇ ಮತ್ತೂಂದು ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ತಂದಿದೆ. ರೈಲ್ವೆ ಟ್ರಾಕ್ ಬಳಿ ಎಂಟಿಎಸ್ ಲೇಔಟ್‌ನಿವಾಸಿ ಭರತ್ (20)ನನ್ನು ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಟವಿ ಶೋ ರೂಮ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಭರತ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಶನಿವಾರ ರಾತ್ರಿ ಕೆಂಗೇರಿಯ ಕರಗ ನಡೆಯುತ್ತಿರುವುದನ್ನು ನೋಡಲು ಬಂದಿದ್ದ. ಈ ವೇಳೆ ಡಿಯೋ ಸ್ಕೂಟರ್‌ನಲ್ಲಿ ಬಂದಿದ್ದ ಯುವಕನೊಬ್ಬ ಭರತ್ ಕೈಗೆ ತಗುಲಿಸಿದ್ದ. ಕೋಪಗೊಂಡ ಭರತ್ ಯುವಕನಿಗೆ ಸ್ಕೂಟರ್ ತಡೆದು ನೋಡಿಕೊಂಡು ಸ್ಕೂಟರ್ ಚಲಾಯಿಸುವಂತೆ ಬುದ್ದಿ ಹೇಳಿದ್ದು ಸ್ನೇಹಿತರು ಜೊತೆಗೂಡಿದ್ದರು.
ಈ ಸಂದರ್ಭದಲ್ಲಿ ಯುವಕ ಮತ್ತು ಭರತ್ ನಡುವೆ ಮಾತಿನ ಚಕಮಕಿ ನಡೆದಿದ್ದು ನಿನ್ನ ನೋಡಿಕೊಳ್ತೀನಿ ಎಂದು ಯುವಕ ಹೇಳಿ ಹೋಗಿದ್ದ. ಘಟನೆ ನಡೆದ ಕೆಲವೇ ನಿಮಿಷದಲ್ಲಿ 10ರಿಂದ 15 ಮಂದಿಯ ಗ್ಯಾಂಗ್‌ನ್ನು ಕರೆದುಕೊಂಡು ಬಂದ ಆರೋಪಿ ಮುಂಜಾನೆ 2 ಗಂಟೆ ಸುಮಾರಿನಲ್ಲಿ ಭರತನ ಜೊತೆ ಮತ್ತೆ ಜಗಳವಾಡಿದ್ದಾನೆ




