February 3, 2026

ಬೆಳ್ತಂಗಡಿ: ರಸ್ತೆಯಿಂದ ಮನೆಯಂಗಳಕ್ಕೆ ಉರುಳಿದ ಆಟೋ ರಿಕ್ಷಾ: ನಾಲ್ವರಿಗೆ ಗಾಯ

0
image_editor_output_image1973300890-1650817567927

ಬೆಳ್ತಂಗಡಿ: ಆಟೋ ರಿಕ್ಷಾವೊಂದು ರಸ್ತೆಯಿಂದ ಮನೆಯ ಅಂಗಳಕ್ಕೆ ಉರುಳಿ ಬಿದ್ದ ಘಟನೆ ಮುಂಡಾಜೆ-ಕಲ್ಮಂಜೆ ಸಂಪರ್ಕ ರಸ್ತೆಯ ಬಲ್ಯಾರ್‍ ಕಾಪು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ರಿಕ್ಷಾ ಉರುಳಿ ಬಿದ್ದ ಪರಿಣಾಮ ಚಾಲಕ ಸಹಿತ ರಿಕ್ಷಾದಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಉಪ್ಪಿನಂಗಡಿ ಕರಾಯದ ಮೂವರು ವ್ಯಕ್ತಿಗಳು ಕಲ್ಮಂಜದ ಒಂಜರೆಬೈಲು ಪರಿಸರದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕಿರಿದಾದ ರಸ್ತೆಯಲ್ಲಿ ಬಲ್ಯಾರ್ ಕಾಪು ಬಳಿ ತಿರುವಿನಲ್ಲಿ ರಿಕ್ಷಾ ಚಾಲಕನ ನಿಯಂತ್ರಣ ಕಳೆದುಕೊಂಡು ಮನೆಯೊಂದರ 15 ಅಡಿ ಆಳದ ಅಂಗಳಕ್ಕೆ ಉರುಳಿ ಬಿದ್ದಿದೆ.

ತತ್‌ಕ್ಷಣ ಗಾಯಾಳುಗಳನ್ನು ಮನೆಯವರು ಮತ್ತು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರು. ಗಾಯಾಳುಗಳಿಗೆ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬಿದ್ದ ರಭಸಕ್ಕೆ ರಿಕ್ಷಾ ನಜ್ಜುಗುಜ್ಜಾಗಿದೆ.

Leave a Reply

Your email address will not be published. Required fields are marked *

error: Content is protected !!