T-20 ವಿಶ್ವಕಪ್:
ಭಾರತದ ವಿರುದ್ಧ ನ್ಯೂಝಿಲೆಂಡ್ ಗೆ 8 ವಿಕೆಟ್ ಗಳ ಜಯ

ದುಬೈ: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಝಿಲೆಂಡ್ 8 ವಿಕೆಟ್ ಗಳ ಜಯ ಸಾದಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 110 ಗಳಿಸಿತು. ನ್ಯೂಝಿಲೆಂಡ್ ತಂಡದ ಮಾರಕ ಬೌಲಿಂಗ್ ಗೆ ಸಿಲುಕಿದ ಭಾರತ ತಂಡದ ಬ್ಯಾಟ್ಸ್‌ಮನ್ ಗಳು ರನ್ ಪೇರಿಸುವಲ್ಲಿ ಎಡವಿದರು.
ಕೆ ಎಲ್ ರಾಹುಲ್ 18(16), ರೋಹಿತ್ ಶರ್ಮಾ14(14), ವಿರಾಟ್ ಕೊಹ್ಲಿ 9(17), ಇಶಾನ್ ಕಿಶಾನ್ 4(8), ರಿಷಭ್ ಪಂತ್ 12(19), ರವೀಂದ್ರ ಜಡೇಜ 26*(19), ಹಾರ್ದಿಕ್ ಪಾಂಡ್ಯ 23(24), ಶಾರ್ದೂಲ್ ಠಾಕೂರ್ 0(3) ಮೊಹಮ್ಮದ್ ಶಮಿ 0*(0) ರನ್ ಗಳಿಸಿದರು.
ಭಾರತ ನೀಡಿದ 111 ರನ್ನಿನ ಗುರಿಯನ್ನು ನ್ಯೂಝಿಲೆಂಡ್ ತಂಡವು 14.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿ 8 ವಿಕೆಟ್ ಗಳ ಜಯ ಸಾಧಿಸಿತು. ಎರಡನೇ ವಿಕೆಟ್ ಗೆ ಡಾರ್ಲಿ ಮಿಚೆಲ್ ಮತ್ತು ಕೇನ್ ವಿಲಿಯಮ್ಸನ್ ಜೊತೆಯಾಟ ತಂಡದ ಗೆಲುವಿಗೆ ಆಸರೆಯಾದರು. ಮಾರ್ಟಿನ್ ಗುಪ್ಟಿಲ್ 20(17), ಡಾರ್ಲಿ ಮಿಚೆಲ್ 49(35) ಕೇನ್ ವಿಲಿಯಮ್ಸನ್ 33(31) ಡೇವೋನ್ ಕನ್ವೇ 2(4) ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ನ್ಯೂಝಿಲೆಂಡ್ ತಂಡದ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಟ್ರೆಂಟ್ ಬೋಲ್ಟ್ 3, ಇಶ್ ಸೋದಿ 2, ಮಿಲ್ನೆ ಮತ್ತು ಟಿಮ್ ಸೌಥಿ ತಲಾ 1 ವಿಕೆಟ್ ಪಡೆದು ಮಿಂಚಿದರು.