ಸಿಪಿಐ(ಎಂ) ನಾಯಕನ ಕೊಲೆ ಪ್ರಕರಣ: ಸಿಎಂ ನಿವಾಸದ ಬಳಿಯೇ ಅಡಗಿದ್ದ ಆರೆಸ್ಸೆಸ್ ಕಾರ್ಯಕರ್ತನ ಬಂಧನ
ತಿರುವನಂತಪುರಂ: ಕೇರಳದಲ್ಲಿ ಸಿಪಿಐ(ಎಂ) ನಾಯಕ ಪುನ್ನೋಲ್ ಹರಿದಾಸನ್ ಅನ್ನು ಕೊಲೆ ಮಾಡಿರುವ ಆರ್‌ಎಸ್‌ಎಸ್ ಕಾರ್ಯಕರ್ತನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ನಿಜಿಲ್‌ದಾಸ್(38) ಪಿಣರಾಯಿ ಅಲ್ಲಿರುವ ಸಿಎಂ ಪಿಣರಾಯಿ ವಿಜಯನ್ ಅವರ ನಿವಾಸದ ಬಳಿಯೇ ಇರುವ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ.
ಆ ಮನೆಯ ಮಾಲೀಕ ಪ್ರಶಾಂತ್ ದುಬೈನಲ್ಲಿ ವಾಸವಿದ್ದು ಆತನ ಪತ್ನಿ ಇತ್ತೀಚೆಗೆ ಬೇರೊಂದು ಊರಿಗೆ ಸ್ಥಳಾಂತರಗೊಂಡಿದ್ದಳು.ಆಕೆ ನಿಜಿಲ್‌ದಾಸ್‌ಗೆ ಸ್ನೇಹಿತೆಯಾಗಿದ್ದ ಕಾರಣ, ಆತನಿಗೆ ತನ್ನ ಮನೆಯಲ್ಲಿ ಅಡಗಿಕೊಳ್ಳಲು ಸ್ಥಳ ಮಾಡಿಕೊಟ್ಟಿದ್ದಾಳೆ.




