March 24, 2026

ಕ್ರೂಸರ್, ಟ್ರಕ್ ನಡುವೆ ಭೀಕರ ಅಪಘಾತ: ಮಕ್ಕಳು, ಮಹಿಳೆಯರು ಸೇರಿದಂತೆ ಏಳು ಮಂದಿ ಸ್ಥಳದಲ್ಲೇ ಮೃತ್ಯು, 11 ಮಂದಿಯ ಸ್ಥಿತಿ ಗಂಭೀರ

0
image_editor_output_image-1313035255-1650755154421.jpg

ಲಾತೂರ್: ಕ್ರೂಸರ್ ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಹಾರಾಷ್ಟ್ರದ ಲಾತೂರ್ನ ಆರ್ವಿ ಗ್ರಾಮದ ಬಳಿ ಶನಿವಾರ ನಡೆದಿದೆ.11 ಮಂದಿಯ ಸ್ಥಿತಿ ಗಂಭೀರವಾಗಿದೆ.

ನಿರ್ಮಲಾ ಸೋಮವಂಶಿ (38), ಸ್ವಾತಿ ಬೋಡ್ಕೆ (35), ಶಕುಂತಲಾ ಸೋಮವಂಶಿ (38), ಸೂಜರಬಾಯಿ ಕದಂ (37), ಚಿತ್ರಾ ಶಿಂಧೆ (35), ಚಾಲಕ ಖಂಡು ರೋಹಿಲೆ (35) ಮೃತಪಟ್ಟವರು.

ತಾರ್, ರಾಜಮತಿ ಸೋಮವಂಶಿ (50), ಸೋನಾಲಿ ಸೋಮವಂಶಿ (25), ರಂಜನಾ ಮಾನೆ (35), ಪರಿಮಳಾ ಸೋಮವಂಶಿ (70), ದತ್ತಾತ್ರೆ ಪವಾರ್ (40), ಶಿವಾಜಿ ಪವಾರ್ (45), ಯಶ್ ಬೋಡ್ಕೆ (9), ಶ್ರುತಿಕಾ ಪವಾರ್ (6), ಗುಲಾಬ್ರಾವ್ ಸೋಮವಂಶಿ (50) ಮತ್ತು ಕಮಲ್ ಜಾಧವ್ (30) ಅವರ ಸ್ಥಿತಿ ಗಂಭೀರವಾಗಿದೆ. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ರಭಸಕ್ಕೆ ಮೃತದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಪಘಾತ ಹೇಗಾಯಿತು ಎಂಬ ಬಗ್ಗೆ ತಿಳಿದು ಬಂದಿಲ್ಲ.

Leave a Reply

Your email address will not be published. Required fields are marked *

error: Content is protected !!