March 24, 2026

250 ರೂ. ಹಣವನ್ನು ವಾಪಸ್ ಕೊಡದಿದ್ದಕ್ಕೆ ಸ್ನೇಹಿತನ ಹತ್ಯೆ

0
Screenshot_2022-04-24-04-30-33-59_680d03679600f7af0b4c700c6b270fe7.jpg

ಬೆಳಗಾವಿ: ಬೆಳಗಾವಿಯಲ್ಲಿ ಕೇವಲ 250 ರೂಪಾಯಿ ಹಣವನ್ನು ವಾಪಸ್ ಕೊಡಲಿಲ್ಲ ಎಂದು ಗೆಳೆಯನನ್ನು ಸ್ನೇಹಿತನೊಬ್ಬ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಕೊಲೆಗೀಡಾಗಿದ ಯುವಕನನ್ನು ಮಹ್ಮದ್ ದಿಲಾಪುಕಾರ ಶೇಖ್ (27) ಎಂದು ಗುರುತಿಸಲಾಗಿದೆ.

ಮಹ್ಮದ್ ದಿಲಾಪುಕಾರ ಶೇಖ್‌‌ನನ್ನು ಅದೇ ಊರಿನ ಉಸ್ಮಾನ ಲಾಲ ಸಾಬ ಶೇಖ್ ಎಂಬಾತ ಕೊಲೆ ಮಾಡಿದ್ದು, ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಇನ್ನು ಮಹಮ್ಮದ್ ಮತ್ತು ಉಸ್ಮಾನ ಒಂದೇ ಏರಿಯದವರಾಗಿದ್ದು, ಉಸ್ನಾನ್ ಸಾರಾಯಿ ತರಲು ಮಹಮ್ಮದ್ ಶೇಖ್‌ಗೆ 500 ರೂಪಾಯಿ ನೋಟು ಕೊಟ್ಟು ಬಿಯರ್ ಬಾಟಲ್ ತೆಗೆದುಕೊಂಡು ಬಾ ಎಂದು ಹೇಳಿದ್ದು, ಆಗ ಮಹ್ಮದ್ ಕೂಡ 250 ರೂಪಾಯಿ ಕೊಟ್ಟು ಸಾರಾಯಿ ತಂದಿದ್ದನು. ಉಳಿದ 250 ರೂಪಾಯಿ ಚಿಲ್ಲರೆ ಹಣವನ್ನು ಉಸ್ಮಾನನಿಗೆ ಹಿಂದಿರುಗಿಸದೇ ತನ್ನಲ್ಲಿ ಇಟ್ಟುಕೊಂಡಿದ್ದನು.

ಉಸ್ಮಾನ್ ಉಳಿದ 250 ರೂ ಚಿಲ್ಲರೆ ಹಣವನ್ನು ಕೊಡುವಂತೆ ಕೇಳಿಕೊಂಡಿದ್ದು, ಈ ವೇಳೆ ಮಹಮ್ಮದ್ ಉಳಿದ ಚಿಲ್ಲರೆ ಹಣವನ್ನು ಕೊಡದೇ ಸತಾಯಿಸಿದ್ದಾನೆ. ಆಗ ಇಬ್ಬರಿಗೂ ಮಾತಿಗೆ ಮಾತು ಬೆಳೆದು ಇಬ್ಬರ ಮಧ್ಯೆ ಜಗಳವಾಗಿದೆ.

ಈ ವೇಳೆ ಮಹಮ್ಮದ್ ಶೇಖ್ ತಂದಂತಹ ಬಿಯರ್ ಬಾಟಲಿನಿಂದಲೇ ಮಹಮ್ಮದನ ತಲೆ ಹೊಡೆದು ಬಾಟಲ್ ನಿಂದ ಚುಚ್ಚಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!