February 4, 2026

ಕಟ್ಟಡದ ಮೇಲಿಂದ ಬಿದ್ದು ಪಿಯು ವಿದ್ಯಾರ್ಥಿ ಮೃತ್ಯು

0
image_editor_output_image-1591163289-1650693536455.jpg

ದಾವಣಗೆರೆ: ಕಟ್ಟಡದ ಮೇಲಿಂದ ಬಿದ್ದು ಪಿಯು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಗರದ ಪಿಸಾಳೆ ಕಾಂಪೌಂಡ್ ನಲ್ಲಿ ಸಂಭವಿಸಿದೆ.

ನಗರದ ಮಿಥುನ್ ಖಾಸಗಿ ಶಾಲೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಮಿಥುನ್ ಮೃತಪಟ್ಟ. ಆತ ಇಂದು ಗಣಿತ ಪರೀಕ್ಷೆ ಬರೆಯಬೇಕಾಗಿತ್ತು.

ಶುಕ್ರವಾರ ರಾತ್ರಿ ಮನೆಯ ಟೆರಸ್ ಮೇಲೆ ಓದುತ್ತಿದ್ದನು. 11.30ರ ಸಮಯದಲ್ಲಿ ಮಗ ಓದುತ್ತಿರುವುದನ್ನು ನೋಡಿ ಪೋಷಕರು ಮಲಗಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಮಿಥುನ್ ಟೆರಸ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವುದು ಕಂಡು ಬಂದಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!