March 19, 2026

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಕುತ್ತಿಗೆ ಪಟ್ಟಿ ಹಿಡಿದು ವಶಕ್ಕೆ ಪಡೆದ ಸಿಐಡಿ

0
image_editor_output_image-354261334-1650670643337

ಬೆಂಗಳೂರು: 542 ಪಿಎಸ್​ಐ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮವು ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ತಿದೆ. ಪಿಎಸ್​ಐ ಅಕ್ರಮದ ಬಗ್ಗೆ ಕಾಂಗ್ರೆಸ್​ ನಾಯಕರು ಧ್ವನಿ ಎತ್ತಿದ್ದರು. ಆದರೆ ಇದೀಗ ವಿಪರ್ಯಾಸ ಎಂಬಂತೆ ಕಾಂಗ್ರೆಸ್​ ನಾಯಕರೇ ಈ ಪ್ರಕರಣದಲ್ಲಿ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲುತ್ತಿದ್ದಾರೆ. ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿ ಆರೋಪಿಯಾಗಿರುವ ರುದ್ರೇಗೌಡ ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಆತನ ಸಹೋದರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಮಹಂತೇಶ್​ ಎಂಬವರನ್ನು ಸಿಐಡಿ ಅಧಿಕಾರಿಗಳು ಕುತ್ತಿಗೆ ಪಟ್ಟಿ ಹಿಡಿದು ಎಳೆ ತಂದಿದ್ದಾರೆ .

ಮಹಂತೇಶ್ ಸೇರಿದಂತೆ ವಿವಿಧ ಸ್ಥಳೀಯ ಕೈ ನಾಯಕರು ನಾಳೆ ಅಫಜಲಪುರದಲ್ಲಿ 61 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ನಡೆಸುವ ತಯಾರಿಯಲ್ಲಿದ್ದರು. ಈ ಕಾರ್ಯಕ್ರಮ ದ ಸಿದ್ಧತೆ ನೋಡಿಕೊಳ್ಳುತ್ತಿದ್ದ ವೇಳೆಯಲ್ಲಿ ಸಿಐಡಿ ಅಧಿಕಾರಿಗಳು ಆರೋಪಿ ಮಹಂತೇಶರನ್ನು ಬಂಧಿಸಿದ್ದಾರೆ.

ಅಜ್ಞಾತ ಸ್ಥಳದಲ್ಲಿರುವ ರುದ್ರೇಗೌಡ ಪಾಟೀಲ್​​ ಸಹೋದರನ ಬಂಧನದ ಬಗ್ಗೆ ಕೇಳುತ್ತಿದ್ದಂತೆಯೇ ಸಿಐಡಿ ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ನನ್ನ ಸಹೋದರನನ್ನೇ ಬಂಧಿಸುತ್ತೀರಾ..? ನಿಮ್ಮನ್ನು ನೋಡಿಕೊಳ್ತೇನೆ ಎಂದು ಆವಾಜ್​ ಹಾಕಿದ್ದಾನೆ ಎನ್ನಲಾಗಿದೆ.

ಇನ್ನು ಈ ಪ್ರಕರಣದ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಈ ಹಗರಣವನ್ನು ಮೊದಲು ಬಯಲಿಗೆಳೆದಿದ್ದು ಕಾಂಗ್ರೆಸ್, ಪ್ರಿಯಾಂಕ್ ಖರ್ಗೆ 52 ಸಾವಿರ ಮಂದಿ ಪಿಎಸ್ಐ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗಾದ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದರು. ಬಿಜೆಪಿ ಸರ್ಕಾರ ಎಲ್ಲಾ ರೀತಿಯಿಂದಲೂ ಭ್ರಷ್ಟಾಚಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!