ಬೈಕ್‌ನಲ್ಲಿ ಕಿಸ್ಸಿಂಗ್ ಮಾಡಿಕೊಂಡು ರೈಡ್.! ಪ್ರಕರಣ: ಸವಾರ ಪೊಲೀಸ್ ವಶಕ್ಕೆ
ಚಾಮರಾಜನಗರ: ಏಪ್ರಿಲ್ 21ರ ಮಧ್ಯಾಹ್ನ 2.00 ಗಂಟೆಯಿಂದ 04.00 ಗಂಟೆ ಸಮಯದಲ್ಲಿ ಚಾಮರಾಜನಗರ – ಗುಂಡ್ಲುಪೇಟೆ ಮುಖ್ಯರಸ್ತೆ ಯಡಪುರ ಗ್ರಾಮದ ಬಳಿ ಬೈಕ್ ಸವಾರನೊಬ್ಬ ಒಂದು ಹುಡುಗಿಯನ್ನು ಬೈಕಿನ ಪೆಟ್ರೋಲ್ ಟ್ಯಾಂಕಿನಲ್ಲಿ ಅಪಾಯಕಾರಿ ರೀತಿಯಲ್ಲಿ ಕೂರಿಸಿಕೊಂಡು ಹೆಲ್ಮೆಟ್ ಧರಿಸದೇ ಅಜಾಗರೂಕತೆಯಿಂದ ಮತ್ತು ಅಪಾಯಕಾರಿಯಾಗಿ ಚಾಲನೆ ಮಾಡಿರುವ ವಿಡಿಯೋ ಹಾಗೂ ಸುದ್ದಿ ನಿಮ್ಮ ಕನ್ನಡ ನ್ಯೂಸ್ ನೌನಲ್ಲಿ ಪ್ರಕ್ಟವಾಗಿತ್ತು, ಇದಲ್ಲದೇ ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದ್ದು ಈ ಸಂಬಂಧ ಬೈಕ್ ಸವಾರನ ಮೇಲೆ ಸಂಚಾರ ನಿಯಮ ಕಾನೂನು ಉಲ್ಲಂಘನೆ ವಿರುದ್ಧ ಚಾಮರಾಜನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಸ್ವಪ್ರೇರಿತ ದೂರು ದಾಖಲಿಸಿಕೊಂಡು ಗಾಡಿ ಟ್ಯಾಂಕರ್ ಮೇಲೆ ಕೂರಿಸಿಕೊಂಡು ಹುಡುಗಿ ಜೊತೆಗೆ ಲಿಪ್ ಲಾಕ್ ಮಾಡಿದ್ದ ರೋಮಿಯೋನನ್ನ ಬಂದಿಸಿದ್ದಾರೆ. ಇದೇ ವೇಳೇ ಆರೋಪಿ ವಿರುದ್ದ ಕಲಂ 279 ಐಪಿಸಿ ಮತ್ತು 184 ಐಎಂವಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.



