March 19, 2026

ಸಾಲ್ಮರ : ಅಸ್ವಾಲಿಹಾ ಶರೀಅತ್, ಪಿ.ಯು.ಕಾಲೇಜ್ ಪ್ರವೇಶ ಪತ್ರಿಕೆ ಬಿಡುಗಡೆ

0
image_editor_output_image1795642841-1650670908264

ಪುತ್ತೂರು : ಶಿಕ್ಷಣ ಕ್ಷೇತ್ರದಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ಪ್ರತಿಷ್ಠಿತ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದ ಇದೀಗ ಆರನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಅಸ್ವಾಲಿಹಾ ಮಹಿಳಾ ಶರೀಅತ್ & ಪಿ.ಯು.ಕಾಲೇಜ್ ನಲ್ಲಿ 2022-23 ನೇ ಸಾಲಿನ ದಾಖಲಾತಿಗೆ ಚಾಲನೆ ನೀಡಲಾಯಿತು.


ಸಂಸ್ಥೆಯ ಪದಾಧಿಕಾರಿಗಳು ಹೊಸದಾಗಿ ದಾಖಲಾತಿ ಪಡೆಯುವ ವಿದ್ಯಾರ್ಥಿನಿಯ ಪರವಾಗಿ ಅವರ ಪೋಷಕರಾದ ಅಬ್ದುರ್ರಹ್ಮಾನ್ ಸಿ.ಎಂ.ನಗರ ಅವರಿಗೆ ಪ್ರವೇಶ ಪತ್ರಿಕೆಯನ್ನು ನೀಡುವ ಮೂಲಕ ಹೊಸ ದಾಖಲಾತಿಗೆ ಚಾಲನೆ ನೀಡಿದರು.


ಸಮಾರಂಭದಲ್ಲಿ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಯು.ಮುಹಮ್ಮದ್ ಹಾಜಿ ಪಡೀಲ್, ಸಂಚಾಲಕರಾದ ಮುಹಮ್ಮದ್ ಸಾಬ್ ಹಾಜಿ, ಅಸ್ವಾಲಿಹಾ ವುಮೆನ್ಸ್ ಶರೀಅತ್ ಕಾಲೇಜ್ ನ ಸಂಚಾಲಕ ಸಿರಾಜುದ್ದೀನ್ ಫೈಝಿ ಮಾಡನ್ನೂರು, ಟ್ರಸ್ಟಿ ಅಮೀನ್ ಅಕರ್ಷನ್ ಮೊದಲಾದವರು ಮಾತನಾಡಿ, ಅಸ್ವಾಲಿಹಾ ಶರೀಅತ್ ಕಾಲೇಜ್ ನಲ್ಲಿ
ಇಸ್ಲಾಮೀ ಶರೀಅತ್ ಅಧ್ಯಯನ ದೊಂದಿಗೆ ಆಧ್ಯಾತ್ಮಿಕ ಮಜ್ಲಿಸ್, ಶರೀಅತ್ ಪ್ರಾಕ್ಟಿಕಲ್ ಟ್ರೈನಿಂಗ್, ಬರಹ,ಭಾಷಣ ಕಲೆಗಳ ವಿಶೇಷ ತರಬೇತಿ, ಇಸ್ಲಾಮೀ ಚೌಕಟ್ಟಿನಡಿ ಪ್ರತಿಭಾ ಪೋಷಣೆ ,ಕುಟುಂಬ ನಿರ್ವಾಹಣೆ ತರಬೇತಿ, ಕಂಪ್ಯೂಟರ್ ಶಿಕ್ಷಣ , ವ್ಯಕ್ತಿತ್ವ ವಿಕಸನ ಕ್ಲಾಸ್, ಟೈಲರಿಂಗ್ ಕ್ಲಾಸ್, ಸ್ಮಾರ್ಟ್ ಕ್ಲಾಸ್, ಹೀಗೆ ಮೌಲ್ಯಾಧಾರಿತ ,ಗುಣ ಮಟ್ಟದ ಶಿಸ್ತು ಬದ್ಧ ಉನ್ನತ ಧಾರ್ಮಿಕ- ಲೌಕಿಕ ಶಿಕ್ಷಣವನ್ನು ನೀಡಲಾಗುತ್ತಿದ್ದು, ಶಬ್ದ ಮಾಲಿನ್ಯ ಮುಕ್ತವಾದ ಕಲಿಕಾ ವಾತವರಣದಲ್ಲಿ ಶಾಂತ,ಸುಂದರ ಹಾಗೂ ಸುರಕ್ಷಿತ ಪರಿಸರದಲ್ಲಿ ಕಾಲೇಜ್ ಕಾರ್ಯನಿರ್ವಹಿಸುತ್ತಿದೆ,ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ, ಶಿಸ್ತು ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಲ್ಲಾ ಕಡೆಗೂ ಕಾಲೇಜ್ ಬಸ್ಸಿನ ವ್ಯವಸ್ಥೆ ಇದೆ ಎಂದು ಹೇಳಿದರು.


ಅಸ್ವಾಲಿಹಾ ವುಮೆನ್ಸ್ ಶರೀಅತ್ ಕಾಲೇಜ್ ನ ಉಸ್ತಾದ್ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಾಲಯ ನಿರ್ವಾಹಕ ಯೂಸುಫ್ ಕೂಟತ್ತಾನ ಕೊನೆಗೆ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!