March 19, 2026

ಶಿವಮೊಗ್ಗ: ಹರ್ಷ ಹತ್ಯೆ ಬಳಿಕ ನಡೆದ ಘರ್ಷಣೆ: ಒಟ್ಟು 96 ಆರೋಪಿಗಳ ಬಂಧನ

0
image_editor_output_image1338934054-1650671072775

ಶಿವಮೊಗ್ಗ: ಹರ್ಷನ ಹತ್ಯೆ ಬಳಿಕ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 96 ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಕಲ್ಲುತೂರಾಟ ಸೇರಿದಂತೆ ವಿವಿಧ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಎಲ್ಲರನ್ನೂ ಬಂಧಿಸಿದಂತಾಗಿದೆ.

ಬಂಧಿದ ವ್ಯಕ್ತಿಯೊಬ್ಬ ನೀಡಿದ ಮಾಹಿತಿ ಮೇರೆಗೆ ಹತ್ಯೆಯ ಸಂಚು ರೂಪಿಸಿದ್ದನ್ನು ವಿಫಲಗೊಳಿಸಲಾಗಿದೆ. ಈ ಪ್ರಕರಣದಡಿ 13 ಜನರನ್ನು ಬಂಧಿಸಲಾಗಿದೆ.

ಸಂಚು ರೂಪಿಸಿದ್ದಾರೆನ್ನಲಾದವರಿಂದ ಮಾರಕಾಸ್ತ್ರ, ಕಾರು, ಎರಡು ಬೈಕ್‌ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!