March 24, 2026

ಜಹಂಗೀರ್ ಪುರಿಯಲ್ಲಿ ಹಿಂಸಾಚಾರ: ಹಿಂದೂ ಪರಿಷತ್, ಭಜರಂಗದಳ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲು

0
Screenshot_2022-04-19-04-57-03-90_680d03679600f7af0b4c700c6b270fe7.jpg

ನವದೆಹಲಿ: ಶನಿವಾರ ಹಿಂಸಾಚಾರ ಭುಗಿಲೆದಿದ್ದ ವಾಯುವ್ಯ ದೆಹಲಿಯ ಜಹಂಗೀರ್ ಪುರಿಯಲ್ಲಿ ಅನುಮತಿ ಪಡೆಯದೇ ಹನುಮ ಜಯಂತಿ ಮೆರವಣಿಗೆ ನಡೆಸಿದ್ದಕ್ಕಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಸದಸ್ಯರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ಸೋಮವಾರ ಹೇಳಿದ್ದಾರೆ.

ಜಹಂಗೀರ್ ಪುರಿಯಲ್ಲಿ ಹನುಮ ಜಯಂತಿ ವೇಳೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸೇವಾ ಪ್ರಮುಖ ಪ್ರೇಮ್ ಶರ್ಮಾ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಪಿಸಿ ಸೆಕ್ಷನ್ 188 ರ ಅಡಿ ಕೇಸ್ ದಾಖಲಿಸಲಾಗಿದೆ ಎಂದು ವಾಯುವ್ಯ ಉಪ ಪೊಲೀಸ್ ಆಯುಕ್ತರಾದ ಉಷಾ ರಂಗಾನಿ ತಿಳಿಸಿದ್ದಾರೆ.

ಯಾವುದೇ ಅನುಮತಿ ಇಲ್ಲದೆ ಶನಿವಾರ ಸಂಜೆ ಹನುಮ ಜಯಂತಿ ಮೆರವಣಿಗೆ ನಡೆಸಲಾಗಿದೆ.  ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸೇವಾ ಪ್ರಮುಖ ಪ್ರೇಮ್ ಶರ್ಮಾ ಅವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಮುಂದಿನ ತನಿಖೆ ಪ್ರಗತಿಯಲ್ಲಿರುವುದಾಗಿ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!