February 3, 2026

ಮೋದಿ, ಅಮಿತ್ ಶಾ ಬಗ್ಗೆ ಮಿಮಿಕ್ರಿ ಮಾಡಿದ್ದ ವ್ಯಕ್ತಿಯ ಬಂಧನ

0
Screenshot_2022-04-19-04-52-08-09_680d03679600f7af0b4c700c6b270fe7.jpg

ಜಬಲ್ ಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದ ನಿಂದಾನಾತ್ಮಕ ಪದ ಬಳಿಸಿ ಮಿಮಿಕ್ರಿ ಮಾಡಿದ್ದ ಆರೋಪದ ಮೇರೆಗೆ ಮಧ್ಯ ಪ್ರದೇಶದ ಜಬಲ್ ಪುರದಲ್ಲಿ ಸೋಮವಾರ 38 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಈತ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅದಿಲ್ ಆಲಿ ಬಂಧಿತ ಆರೋಪಿ. ಈತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿ ಮಿಮಿಕ್ರಿ ಮಾಡಿದ್ದಕ್ಕೆ ಆತನನ್ನು ಬಂಧಿಸಲಾಗಿದೆ ಎಂದು ಜಬಲ್ ಪುರ ಎಸ್ ಪಿ ಸಿದ್ದಾರ್ಥ್ ಬಹುಗುಣ ತಿಳಿಸಿದ್ದಾರೆ. 

ಐಪಿಸಿ ಸೆಕ್ಷನ್ 153 (  ಹಿಂಸಾಚಾರಕ್ಕೆ ಪ್ರಚೋದಿಸುವ) ಸೆಕ್ಷನ್ 294 ( ಅಶ್ಲೀಲ ಕೃತ್ಯಗಳು ಮತ್ತು ಗೀತೆಗಳು) ಅಡಿಯಲ್ಲಿ ಒಮ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಎಸ್ ಪಿ ಹೇಳಿದ್ದಾರೆ. 

Leave a Reply

Your email address will not be published. Required fields are marked *

error: Content is protected !!