March 24, 2026

ಹರ್ಷನ ಕೊಲೆಗೆ ಪ್ರತೀಕಾರವಾಗಿ ಮುಸ್ಲಿಂ ಯುವಕನ ಕೊಲೆಗೆ ಸಂಚು ಆರೋಪ: 13 ಮಂದಿ ಆರೋಪಿಗಳ ಬಂಧನ

0
image_editor_output_image559533764-1650104078288.jpg

ಶಿವಮೊಗ್ಗ: ಬಜರಂಗದಳದ ಹರ್ಷನ ಕೊಲೆಗೆ ಪ್ರತೀಕಾರವಾಗಿ ಮುಸ್ಲಿಂ ಯುವಕನ ಕೊಲೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಖತರ್ನಾಕ್‌ ಗ್ಯಾಂಗ್‌ನ್ನು ಶಿವಮೊಗ್ಗ ಪೊಲೀಸರ ಸಮಯಪ್ರಜ್ಞೆಯಿಂದ ಬಂಧಿಸಲಾಗಿದೆ.

ಇದರೊಂದಿಗೆ ಮತ್ತೊಂದು ಅನಾಹುತ ನಡೆಯುವುದನ್ನು ಪೊಲೀಸರು ನಿಷ್ಕ್ರಿಯಗೊಳಿಸಿದ್ದಾರೆ. ಹರ್ಷನ ಕಗ್ಗೊಲೆ ಸಮಯದಲ್ಲಿ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆದಿತ್ತು. ಆ ವೇಳೆ ಆರೋಪಿ ಜೇಟ್ಲಿ ಎಂಬಾತನನ್ನು ಶಿವಮೊಗ್ಗ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಮುಸ್ಲಿಂ ಯುವಕನ ಹತ್ಯೆಗೆ ಸಂಚು ರೂಪಿಸಿದ್ದಾಗಿ ಹೇಳಿದ್ದಾನೆ.

ಇದೀಗ ಬಂಧಿತನ ಹೇಳಿಕೆ ಆಧರಿಸಿ 13 ಜನರ ವಿರುದ್ಧ FIR ದಾಖಲಿಸಿಕೊಳ್ಳಲಾಗಿದೆ. ರಾಖಿ, ವಿಶ್ವಾಸ್, ಕೋಟಿ, ಕುಲ್ಡಾ, ಅಪ್ಪು, ಸಚಿನ್ ಸೇರಿದಂತೆ 13 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!