March 20, 2026

ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಕುರಿತು ಸರಿಯಾದ ತನಿಖೆ ನಡೆದರೆ ಅರ್ಧ ಸಚಿವ ಸಂಪುಟ ಖಾಲಿ: ಪ್ರಿಯಾಂಕ್ ಖರ್ಗೆ

0
Screenshot_2022-04-16-04-42-49-24_680d03679600f7af0b4c700c6b270fe7.jpg

ಬೆಂಗಳೂರು: ‘ರಾಜ್ಯ ಸರ್ಕಾರದ ಭ್ರಷ್ಟಾಚಾರದ ಕುರಿತು ಸರಿಯಾದ ರೀತಿಯಲ್ಲಿ ತನಿಖೆ ನಡೆದರೆ ಅರ್ಧ ಸಚಿವ ಸಂಪುಟ ಖಾಲಿಯಾಗಲಿದೆ’ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, ‘ಗಂಗಾ ಕಲ್ಯಾಣ ಯೋಜನೆ ಯಲ್ಲಿ 14,537 ಕೊಳವೆ ಬಾವಿ ಮಂಜೂರಾಗಿದ್ದು, ಅದರಲ್ಲಿ ಅವ್ಯವ ಹಾರ ನಡೆದಿದೆ ಎಂದರು.

ಈ ತನಿಖೆಯನ್ನು ಆರ್‌ಡಿಪಿಆರ್‌ ಇಲಾಖೆಯ ಎಂಜಿನಿ ಯರ್‌ಗೆ ವಹಿಸಲಾಗಿದ್ದು, 15 ದಿನಗಳಲ್ಲಿ ವರದಿ ಬರಬೇಕಿತ್ತು. ದೇವರಾಜ ಅರಸು ನಿಗಮದಲ್ಲಿ ಒಂದು ಕೊಳವೆ ಬಾವಿ ಕೊರೆಯಲು ₹ 93 ಲಕ್ಷ ಬಿಲ್ ಮಾಡಲಾಗುತ್ತಿದೆ. ಆದರೆ, ಅಂಬೇಡ್ಕರ್, ಆದಿ ಜಾಂಬವ ನಿಗಮದಲ್ಲಿ ಅದೇ ಕೊಳವೆ ಬಾವಿ ಕೊರೆಯಲು ₹ 1.83 ಲಕ್ಷ ವೆಚ್ಚ ಮಾಡ ಲಾಗುತ್ತಿದೆ’ ಅವರು ದೂರಿದರು.

‘ಗಂಗಾಕಲ್ಯಾಣ ಯೋಜನೆಯಲ್ಲಿ ಸಮಾಜ ಕಲ್ಯಾಣ ಸಚಿವರಿಗೂ ಶೇ 40ರಷ್ಟು ಕಿಕ್ ಬ್ಯಾಕ್ ಹೋಗಿದೆ. ಹಿಂದಿನ ಸಚಿವರು, ಈಗಿನ ಸಚಿವರು ಇಬ್ಬರೂ ಇದರ ಹಿಂದೆ ಇದ್ದಾರೆ’ ಎಂದು ಆರೋಪಿಸಿ ಅವರು, ‘ಈ ಬಗ್ಗೆ ಸರಿಯಾಗಿ ತನಿಖೆ ನಡೆದರೆ ಇನ್ನೂ ಎರಡು ವಿಕೆಟ್‌ ಬೀಳಲಿದೆ’ ಎಂದರು.

Leave a Reply

Your email address will not be published. Required fields are marked *

error: Content is protected !!