August 20, 2026

ಬೆಂಗಾಲ್ ಉಡದ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ

0
Screenshot_2022-04-14-14-05-15-19_680d03679600f7af0b4c700c6b270fe7.jpg

ಮುಂಬೈ: ಮಹಾರಾಷ್ಟ್ರದ ಗೋಥಾನೆ ಗ್ರಾಮದ ಬಳಿ ಇರುವ ಸಹ್ಯಾದ್ರಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಬೆಂಗಾಲ್ ಮಾನಿಟರ್ ಉಡದ ಮೇಲೆ ನಾಲ್ವರು ಕಾಂಮಾಂಧರು ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿಗಳನ್ನು ಸಂದೀಪ್​ ತುಕ್ರಮ್​, ಪವಾರ್​ ಮಂಗೇಶ್​, ಜನಾರ್ಧನ್​ ಕಾಮ್ಟೇಕರ್​ ಮತ್ತು ಅಕ್ಷಯ್​ ಸುನೀಲ್​ ಎಂದು ಗುರುತಿಸಲಾಗಿದೆ. ನಾಲ್ವರು ಆರೋಪಿಗಳನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

ನಾಯಿ, ಹಸು, ಮೇಕೆಗಳ ಮೇಲೆ ಅತ್ಯಾಚಾರ ಎಸಗಿರುವ ಘಟನೆಗಳನ್ನು ಆಗಾಗ ಕೇಳಿದ್ದೇವೆ. ಇದೀಗ ಉಡದ ಮೇಲೆಯೂ ಕಾಮುಕರ ಕಣ್ಣು ಬಿದ್ದಿರುವ ಮನುಕುಲವೇ ತಲೆ ತಗ್ಗಿಸುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಸಹ್ಯಾದ್ರಿ ಸಂರಕ್ಷಿತಾರಣ್ಯದಲ್ಲಿ ಬೆಂಗಾಲ್ ಮಾನಿಟರ್ ಉಡಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತವೆ. ಅರಣ್ಯದಲ್ಲಿ ಅಡ್ಡಾಡುತ್ತಿದ್ದ ನಾಲ್ವರು ಉಡದ ಮೇಲೆ ಅತ್ಯಾಚಾರ ಎಸಗಿರುವುದು ಅಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಗೊತ್ತಾಗಿದೆ.

ತತ್‌ಕ್ಷಣ ಕಾರ್ಯಪ್ರವೃತ್ತರಾದ ಅರಣ್ಯಾಧಿಕಾರಿಗಳು ನಾಲ್ವರನ್ನು ಹಿಡಿದು ಅವರ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡು ನೋಡಿದಾಗ ಅತ್ಯಾಚಾರದ ವೀಡಿಯೋ ಕೂಡಾ ಮಾಡಿರುವುದು ಗೊತ್ತಾಗಿದೆ. ತನಿಖೆ ವೇಳೆ ನಾಲ್ವರು ಆರೋಪಿಗಳು ಕೊಂಕಣದಿಂದ ಕೊಲ್ಲಾಪುರದ ಚಂದೋಳಿ ಗ್ರಾಮಕ್ಕೆ ಬೇಟೆ ಸಲುವಾಗಿ ಬಂದಿರುವುದಾಗಿ ಹೇಳಿದ್ದಾರೆ.

ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಅತ್ಯಾಚಾರ ಆರೋಪ ಸಾಬೀತಾದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ರ ಅಡಿಯಲ್ಲಿ ಅಪರಾಧಿಗಳು ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

Leave a Reply

Your email address will not be published. Required fields are marked *

You may have missed

error: Content is protected !!