August 20, 2026

ಪುತ್ತೂರು: ಜಾತ್ರೆಯಲ್ಲಿ ಭಾರೀ ಗಾಳಿಗಾಳಿಗೆ ಅಸ್ತವ್ಯಸ್ತ: ಗೋಪುರದ ಮೇಲೆ ಪ್ರಭಾವಳಿ ಉರುಳಿ ಮಹಿಳೆಯರಿಗೆ ಗಾಯ

0
image_editor_output_image212710310-1649912361998.jpg

ಪುತ್ತೂರು: ನಿನ್ನೆ ಸಂಜೆ ವ್ಯಾಪಾರದ ಭಾರೀ ಮಳೆಯಿಂದಾಗಿ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆಯಲ್ಲಿದ್ದ ವ್ಯಾಪಾರ
ಮಳಿಗೆಗಳಿಗೆ ಹಾನಿಯುಂಟಾಗಿದೆ. ದೇವಳದ ಗದ್ದೆಯ ಎದುರು ಭಾಗದ ಶ್ರೀ ಶಿವಪಾರ್ವತಿ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವನ್ನು ಮುಂದೂಡಲಾಯಿತು.

ಭಾರೀ ಗಾಳಿ ಹಾಗೂ ಗುಡುಗು ಸಹಿತವಾಗಿ ಮಳೆಗೆ ಜಾತ್ರಾ ಗದ್ದೆಯಲ್ಲಿದ್ದ ವ್ಯಾಪಾರ ಮಳಿಗೆಗಳ ಶೀಟ್‌ಗಳು ಹಾರಿಹೋಗಿದೆ. ಗದ್ದೆಯ ತುಂಬ ನೀರು ನಿಂತಿದ್ದು ವ್ಯಾಪಾರಿಗಳಿಗೆ ನಷ್ಟ ಉಂಟಾಗಿದೆ. ಪ್ರೇಕ್ಷಕರು ಮತ್ತು ಕಲಾವಿದರು ಗಾಳಿ ಮಳೆಗೆ ವೇದಿಕೆಯ ಸಭಾಂಗಣದಲ್ಲಿ ಆಶ್ರಯ ಪಡೆದರು.
ಕಾರ್ಯಕ್ರಮವನ್ನು ಬಳಿಕ ಸ್ವಗಿತಗೊಳಿಸಲಾಯಿತು.

ಭಾರೀ ಗಾಳಿಗೆ ದೇವಸ್ಥಾನದ ಮುಂಭಾಗದ ಗೋಪುರದ ಮೇಲೆ ಪ್ರಭಾವಳಿ ಮಾದರಿ ವಿದ್ಯುತ್ ದೀಪಾಲಂಕಾರಗಳು ಉರುಳಿ ಬಿದ್ದು ಕೆಳ ಭಾಗದಲ್ಲಿದ್ದ ಭಕ್ತಾದಿಗಳಿಗೆ ಗಾಯಗಳಾಗಿದೆ.

ಪಾಂಗಾಳಾಯಿಯ ರೀತಾ, ಹಾಗೂ ನೆಹರು ನಗರದ ಹೇಮಾವತಿ ಗಾಯಗೊಂಡಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾಸಕ ಸಂಜೀವ ಮಠಂದೂರು ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮವನ್ನು ವಿಚಾರಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!