August 20, 2026

ರಾಜ್ಯದ ಜನತೆ ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು: ಡಾ. ಕೆ ಸುಧಾಕರ್

0
K-sSUDHA-1592851415.jpg

ಬೆಂಗಳೂರು: ರಾಜ್ಯದ ಜನತೆ ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು. ಈ ಮೂಲಕ ನಾಲ್ಕನೇ ಅಲೆಯನ್ನ ತಡೆಯಲು ಸರ್ಕಾರದ ಜೊತೆ ಜನರು ಕೈ ಜೋಡಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಎಂದಿನಂತೆ ಮಾಸ್ಕ್‌ ಧರಿಸಬೇಕು. ನಾಲ್ಕನೇ ಅಲೆಯನ್ನ ತಡೆಯಲು ಜನರು ಕೈ ಜೋಡಿಸಬೇಕು. ಬೂಸ್ಟರ್‌ ಹಾಕಿಸಿಕೊಳ್ಳಲು ನಿರ್ಲಕ್ಷ್ಯ ಮಾಡಬೇಡಿ. ಬಾಕಿ ಇರುವವರು 1,2 ಮತ್ತು 3ನೇ ಡೋಸ್‌ ಹಾಕಿಸಿಕೊಳ್ಳಿ ಎಂದಿದ್ದಾರೆ.

ಇನ್ನು ದೇಶದಲ್ಲಿ ರೂಪಾಂತರ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲೂ ರೂಪಾಂತರ ಪ್ರಕರಣಗಳು ಹೆಚ್ಚುತ್ತಿದೆ. ಹಾಗಾಗಿ ಎಚ್ಚರಿಕೆ ಆಗತ್ಯ. ಶೀಘ್ರವೇ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಲಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!