August 20, 2026

ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಬೇಡಿ-
ಹಿಂದೂ ಮುಸ್ಲಿಂ ಒಂದೇ ತಾಯಿ ಮಕ್ಕಳಂತೆ ಬಾಳಬೇಕು: ಮಾಜಿ ಸಿ.ಎಂ ಯಡಿಯೂರಪ್ಪ

0
image_editor_output_image-809470371-1649679729811.jpg

ಬೆಂಗಳೂರು: ರಾಜ್ಯದಲ್ಲಿ ಹಲವು‌ ದಿನಗಳಿಂದ ನಡೆಯುತ್ತಿರುವ ಅಹಿತಕರ ವಾತಾವರಣದ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಿಡಿಮಿಡಿಗೊಂಡಿದ್ದು, ಎಲ್ಲವನ್ನೂ ಇಲ್ಲಿಗೆ ಬಿಟ್ಟು, ನಿಮ್ಮ ಕೆಲಸ ನೀವು ಮಾಡಿ. ಇಲ್ಲವಾದ್ರೆ, ಸರ್ಕಾರದಿಂದ ಕಠಿಣ ಕ್ರಮ ಖಂಡಿತ ಎಂದು ಹೇಳಿದ್ದಾರೆ.

ನಾನು ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಹಿಂದೂ ಮುಸ್ಲಿಂ ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಅನ್ನೋದು ನನ್ನ ಅಪೇಕ್ಷೆ. ಕಿಡಿಗೇಡಿಗಳು ಇದನ್ನು ಅಡ್ಡಿ ಮಾಡುವಂತ ಪ್ರಯತ್ನ ಮಾಡಿದ್ರೆ, ಈಗಾಗಲೇ ಮುಖ್ಯಮಂತ್ರಿಗಳು ಹೇಳಿದಂತೆ ಅಂಥವರ ಮೇಲೆ ಕಾನೂನಿನ ಕ್ರಮ ತೆಗೆದಕೊಳ್ಳುತ್ತೇವೆ ಎಂದು ಹೇಳಿದರು.

ಇನ್ನು ಮುಂದೆಯಾದರು ಅಹಿತಕರ ಘಟನೆ ನಡೆಯದಂತೆ ಒಟ್ಟಾಗಿ ಬಾಳುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಿಹೆಚ್ ಪಿ, ಭಜರಂಗದಳಕ್ಕೆ ತಾಕೀತು ಮಾಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!