May 16, 2026

ಸುಳ್ಯ ಚಾಲಕನ  ನಿಯಂತ್ರಣ ತಪ್ಪಿ ಕಾರು ಪಲ್ಟಿ: ಒಂದೇ ಕುಟುಂಬದ ನಾಲ್ವರಿಗೆ ಗಾಯ ಜೀವಾಪಾಯದಿಂದ ಪಾರು

0
image_editor_output_image1894603359-1649661526893

ಸುಳ್ಯ:  ಮಾಣಿ-ಮೈಸೂರು ಹೆದ್ದಾರಿ ಯಲ್ಲಿ ಪೆರಾಜೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ  ಸುಳ್ಯದ ಹಳೆಗೇಟು ಬೆಟ್ಟಂಪಾಡಿ ಮೂಲದ ಕುಟುಂಬದ ನಾಲ್ವರು  ಗಾಯಗೊಂಡ ಘಟನೆ  ಇಂದು ಬೆಳಿಗ್ಗೆ ವರದಿಯಾಗಿದೆ.

ಹಳೆಗೇಟು ಬೆಟ್ಟಂಪಾಡಿ ನಿವಾಸಿ ಬಶೀರ್  ಎಂಬುವವರು ತಮ್ಮ ಅತ್ತೆಯನ್ನು ವಿದೇಶಕ್ಕೆ ಬೀಳ್ಕೊಡಲು ಕಣ್ಣೂರು ಏರ್ಪೋರ್ಟಿಗೆ  ಬಿಟ್ಟು ಹಿಂತಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

ಕಾರಿನಲ್ಲಿ ಚಾಲಕ ಶರೀಫ್  ಹಾಗೂ ಬಶೀರ್, ಅವರ ಪತ್ನಿ, ಮತ್ತೋರ್ವ ಕುಟುಂಬದ ಮಹಿಳೆ,  ಹಾಗೂ ಏಳು ವರ್ಷದ ಮಗುವೊಂದು ಇದ್ದರು.
ಕಾರು ಅಪಘಾತದಿಂದ ನಾಲ್ವರಿಗೆ ಸಣ್ಣಪುಟ್ಟ ಗಾಯವಾಗಿದ್ದು ಮಗು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದೆ.  ಗಾಯಾಳುವನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!