March 24, 2026

ಮಂಡ್ಯದ ಜನರು ಹೇಳಿದರೆ ಬಿಜೆಪಿಗೆ ಸೇರ್ಪಡೆ: ಸಂಸದೆ ಸುಮಲತಾ ಅಂಬರೀಷ್

0
image_editor_output_image-1888156378-1649659565693.jpg

ಬೆಂಗಳೂರು: ನಾನು ಚುನಾವಣೆಗೆ ಸ್ಪರ್ಧೆ ಮಾಡಿದಾಗಿನಿಂದ ಬಿಜೆಪಿ ಸೇರ್ಪಡೆ ಬಗ್ಗೆ ಮಾತು ಕೇಳಿ ಬರುತ್ತಿದೆ. ನನ್ನ ಜಿಲ್ಲೆಯ ಅಭಿವೃದ್ಧಿಯೇ ನನ್ನ ಉದ್ದೇಶ. ಈಗ ಯಾವುದೇ ಪಕ್ಷ ಸೇರಲು ನನಗೆ ತಾಂತ್ರಿಕ ಸಮಸ್ಯೆಯಿದೆ. ಜಿಲ್ಲೆಯ ಜನ ಹೇಗೆ ಹೇಳುತ್ತಾರೆಯೋ ಹಾಗೆ. ಒಂದು ಪಕ್ಷ ಸೇರಲು ಮಂಡ್ಯದ ಜನ ಹೇಳಬೇಕೇ ಹೊರತು ನಾನಾಗಿ ನಿರ್ಧಾರ ತೆಗೆದುಕೊಳ್ಳಲು ಆಗುವಿದಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೇಳಿದರು.

ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಹೇಳಿದ್ದಕ್ಕೆ ಪಕ್ಷೇತರನಾಗಿ ಸ್ಪರ್ಧಿಸಿದ್ದೆ. ಅಭಿಷೇಕ್ ಅವರನ್ನೂ ಚುನಾವಣೆಗೆ ನಿಲ್ಲಿಸಿ ಎಂದು ಜನ ಹೇಳುತ್ತಿದ್ದಾರೆ. ಚುನಾವಣೆಗೆ ಸ್ಪರ್ಧೆ ಮಾಡುವ ನಿರ್ಧಾರ ಅಭಿಷೇಕ್ ಗೆ ಬಿಟ್ಟಿದ್ದು ಎಂದರು.

Leave a Reply

Your email address will not be published. Required fields are marked *

error: Content is protected !!