February 1, 2026

ಅವಿಶ್ವಾಸ ನಿರ್ಣಯದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪದಚ್ಯುತಿ

0
download.jpeg

ಇಸ್ಲಾಮಾಬಾದ್: ಪ್ರಧಾನಿ ಇಮ್ರಾನ್ ಖಾನ್ ಅವರು ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸಲು ವಿಫಲರಾಗಿ, ಪ್ರಧಾನಿ ಪಟ್ಟವನ್ನು ತ್ಯಜಿಸಿದ್ದಾರೆ. ಮಧ್ಯರಾತ್ರಿ ನಡೆದ ವಿಶ್ವಾಸಮತ ಮಂಡನೆಯಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ 174 ಸದಸ್ಯರು ಮತ ಹಾಕಿದರು.

ಈ ಮೂಲಕ ಇಮ್ರಾನ್ ಖಾನ್ ಅವರು ಅವಿಶ್ವಾಸ ಮತದಲ್ಲಿ ಸೋತ ಪಾಕಿಸ್ತಾನದ ಮೊದಲ ಪ್ರಧಾನಿಯಾಗಿದ್ದಾರೆ. ಸದನದಲ್ಲಿ ಹಾಜರಿದ್ದ ಪ್ರತಿಪಕ್ಷಗಳ 176 ಹಾಗೂ ಆಡಳಿತ ಪಕ್ಷದ 22 ಸದಸ್ಯರು ನಿರ್ಣಯದ ಪರವಾಗಿ ಮತ ಹಾಕಿದರು.

ಪ್ರಧಾನಿ ಇಮ್ರಾನ್ ಖಾನ್ ಮತದಾನದ ಸಮಯದಲ್ಲಿ ಗೈರುಹಾಜರಾಗಲು ನಿರ್ಧರಿಸಿದರೆ, ಅವರ ಪಕ್ಷದ ಶಾಸಕರು ವಾಕ್‌ಔಟ್ ನಡೆಸಿದರು. 342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ 174 ಶಾಸಕರು ಮತ ಚಲಾಯಿಸುವುದರೊಂದಿಗೆ ಅಂತಿಮವಾಗಿ ಅವಿಶ್ವಾಸ ಮತವನ್ನು ಅಂಗೀಕರಿಸಲಾಯಿತು.

ಸುಪ್ರೀಂ ಕೋರ್ಟ್ ಆದೇಶದಂತೆ ಶನಿವಾರ ಇಮ್ರಾನ್ ಖಾನ್ ಅವಿಶ್ವಾಸ ಗೊತ್ತುವಳಿ ಎದುರಿಸಬೇಕತ್ತು. ಆದರೆ ಸ್ಪೀಕರ್ ನೆರವಿನಿಂದ ಇಡೀ ದಿನ ಕಣ್ಣಾಮುಚ್ಚಾಲೆಯಾಡಿದ ಇಮ್ರಾನ್ ರಾತ್ರಿಯ ತನಕವೂ ಮತದಾನ ನಡೆಸಲಿಲ್ಲ.

ಕಲಾಪ ಆರಂಭವಾದಾಗಿನಿಂದಲೂ ವಿಪಕ್ಷಗಳ ನಾಯಕರು, ಸರ್ವೋಚ್ಚ ನ್ಯಾಯಾಲಯದ ಆದೇಶದ ಅನ್ವಯ ಕೂಡಲೇ ಅವಿಶ್ವಾಸ ಗೊತ್ತುವಳಿ ಪರ ಮತದಾನ ನಡೆಸಿ ಎಂದು ಸ್ಪೀಕರ್‌ ಖೈಸರ್‌ ಅವರನ್ನು ಒತ್ತಾಯಿಸತೊಡಗಿದರು. ವಿಪಕ್ಷ ನಾಯಕ ಶೆಹಬಾಜ್‌ ಷರೀಫ್ ಅವರು ಸಂಸತ್‌ನಲ್ಲಿ ಮಾತನಾಡುತ್ತಿದ್ದಂತೆ ಆಡಳಿತಾರೂಢ ಪಕ್ಷದ ಸಂಸದರು ಗದ್ದಲವೆಬ್ಬಿಸಿದರು ಎಂಬ ನೆಪ ಹೇಳಿ ಸ್ಪೀಕರ್‌ ಕಲಾಪವನ್ನು ಮುಂದೂಡಿದರು.

Leave a Reply

Your email address will not be published. Required fields are marked *

error: Content is protected !!