August 20, 2026

ತೆಂಗಿನಕಾಯಿ ಗೋದಾಮಿಗೆ ಕಿಡಿಗೇಡಿಗಳಿಂದ ಬೆಂಕಿ: ಲಕ್ಷಾಂತರ ನಷ್ಟ

0
n3758752621649567667736701be7d6fc1a61863967035d4a1ca1cb0d2c99f7227e1889cb31938d45a2cd43.jpg

ಚಿಕ್ಕಮಗಳೂರು: ತೆಂಗಿನಕಾಯಿ ಗೋದಾಮಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ವಿಕೃತಿ ಮೆರೆದಿರೋ ಘಟನೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಗುಳ್ಳದಮನೆ ಗ್ರಾಮದಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ.

ನರಸಿಂಹಪ್ಪ ಎಂಬುವವರಿಗೆ ಸೇರಿದ ತೆಂಗಿನಕಾಯಿ ಶೆಡ್ ಆಗಿದ್ದು, ಲಕ್ಷಾಂತರ ಮೌಲ್ಯದ ತೆಂಗಿನಕಾಯಿ ಸುಟ್ಟು ಭಸ್ಮವಾಗಿದೆ.

ಬೆಂಕಿ ಅವಘಡದಲ್ಲಿ ಕೊಬ್ಬರಿಗೆ ಹಾಕಿದ್ದ ಲಕ್ಷಾಂತರ ಮೌಲ್ಯದ ಒಣಗಿದ ಕಾಯಿ ಸುಟ್ಟು ಬೂದಿಯಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದು, ಲಿಂಗದಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!