September 25, 2026

ಕಾಣೆಯಾಗಿದ್ದ ಬಾಲಕಿಯ ಮೃತದೇಹವು ಅಸಾರಾಂ ಬಾಪು ಬೆಂಬಲಿಗರಿಗೆ ಸೇರಿದ ಆಶ್ರಮದ ಬಳಿ ಪತ್ತೆ

0
image_editor_output_image-1644990072-1649458652963.jpg

ಉತ್ತರ ಪ್ರದೇಶ: ಕಾಣೆಯಾಗಿದ್ದ 13 ವರ್ಷದ ಬಾಲಕಿಯ ಮೃತದೇಹವು ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಬೆಂಬಲಿಗರಿಗೆ ಸೇರಿದ ಆಶ್ರಮದ ಬಳಿ ಶುಕ್ರವಾರ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಮೃತ ಬಾಲಕಿ ಬಿಮೌರ್‌ ಗ್ರಾಮದ ನಿವಾಸಿ. ಗುರುವಾರದಿಂದ ಕಾಣೆಯಾಗಿದ್ದಳು. ಸಂತ್ರಸ್ತೆಯ ಪೋಷಕರು ನೀಡಿದ ದೂರಿಗೆ ಸಂಬಂಧಿಸಿ ತನಿಖೆಗೆ ತಂಡವನ್ನು ನಿಯೋಜಿಸಲಾಗಿದೆ’ ಎಂದು ಎಎಸ್‌ಪಿ ಶಿವರಾಜ್‌ ಪ್ರಜಾಪತಿ ತಿಳಿಸಿದ್ದಾರೆ.

 

‘ಬಹರಾಯಿಚ್‌ ರಸ್ತೆಯ ಆಶ್ರಮವೊಂದರ ಹೊರಗೆ ನಿಲ್ಲಿಸಿದ್ದ ಕಾರಿನಲ್ಲಿ ಬಾಲಕಿ ಶವ ಪತ್ತೆಯಾಗಿದೆ. ಅಸಾರಾಂ ಬಾಪು ಅವರ ಬೆಂಬಲಿಗರು ನಿರ್ಮಿಸಿರುವ ಆಶ್ರಮ ಇದಾಗಿದೆ. ಬಾಲಕಿಯ ಮೃತದೇಹವನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆಶ್ರಮದ ಕೆಲವರನ್ನು ವಶಕ್ಕೆ ಪಡೆದು ಪ್ರಶ್ನಿಸಲಾಗುತ್ತಿದೆ’ ಎಂದು ಶಿವರಾಜ್‌ ಪ್ರಜಾಪತಿ ಮಾಹಿತಿ ನೀಡಿದ್ದಾರೆ.

ಸ್ಥಳೀಯ ಪೊಲೀಸರ ಪ್ರಕಾರ ಮೂರು ವರ್ಷಗಳ ಹಿಂದೆ ಸಂತ್ರಸ್ತೆಯ ತಂದೆ ಅನುಮಾನಸ್ಪದವಾಗಿ ಕಾಣೆಯಾಗಿದ್ದಾರೆ. ಇದುವರೆಗೆ ಅವರು ಎಲ್ಲಿದ್ದಾರೆ ಎಂಬುದೇ ಗೊತ್ತಿಲ್ಲ.

Leave a Reply

Your email address will not be published. Required fields are marked *

You may have missed

error: Content is protected !!