ಬೆಳ್ಳಾರೆ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಗುಡ್ಡದಲ್ಲಿ ಪತ್ತೆ
ಬೆಳ್ಳಾರೆ: ಠಾಣಾ ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಬೊಳಿಯಾಲ ನಿವಾಸಿ ಸೇಸಪ್ಪ ಪೂಜಾರಿ(65)ಎಂಬವರು ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಇಂದು ಅದೇ ಗ್ರಾಮದ ಗುಡ್ಡದಲ್ಲಿ ಅವರ ಶವ ಪತ್ತೆಯಾಗಿದೆ.
ಮೃತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಯಾರಾದರೂ ಕೊಲೆ ಮಾಡಿ ಗುಡ್ಡದಲ್ಲಿ ಎಸೆದಿದ್ದಾರೆಯೇ ಎಂಬ ಸುದ್ದಿ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಸೇಸಪ್ಪ ಪೂಜಾರಿ ನಾಪತ್ತೆಯಾಗಿದ್ದ ಸಂದರ್ಭ ಸಂಬಂಧಿಕರು “ಸೇಸಪ್ಪ ಪೂಜಾರಿ ಯವರು ಸಕಲೇಶಪುರದಲ್ಲಿ ಹೋಟೆಲು ಮಾಡಿದ್ದಾರೆಂದು” ಹೇಳುತ್ತಿದ್ದು, ಇದೀಗ ಮೃತದೇಹ ಗುಡ್ಡದಲ್ಲಿ ಸಿಕ್ಕಿದ್ದು, ಸಾವಿನ ಬಗ್ಗೆ ಹಲವು ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಮೂಡಿದೆ.




