March 19, 2026

ಬಂಟ್ವಾಳ: ಕಾರು ಮತ್ತು ಎರಡು ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಇಬ್ಬರಿಗೆ ಗಂಭೀರ ಗಾಯ

0
IMG-20220408-WA0006.jpg

ಬಂಟ್ವಾಳ: ಕಾರೊಂದು ಓವರ್ ಟೇಕ್ ಮಾಡುತ್ತಿದ್ದ ಭರದಲ್ಲಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೆಲ್ಕಾರ್ ಟ್ರಾಫಿಕ್ ಠಾಣೆಯ ಮುಂಭಾಗದಲ್ಲಿ ಎದುರಿನಂದ ಬರುತ್ತಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಪ್ರತ್ಯೇಕ ದ್ವಿ ಚಕ್ರ ಸವಾರಿ ಮಾಡುತ್ತಿದ್ಧ ಸಹೋದರರು ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಎ.8 ರ ಶುಕ್ರವಾರ ಸಂಜೆ ವೇಳೆ ನಡೆದಿದೆ.

ಬೋಳಂಗಡಿ ನಿವಾಸಿಗಳಾದ ರಿಜ್ವಾನ್ ಮತ್ತು ರಮೀಜ್ ಗಾಯಗೊಂಡವರು.

ಅತೀ ವೇಗದ ಚಾಲನೆ ಅಪಘಾತಕ್ಕೆ ಕಾರಣವೆನ್ನಲಾಗಿದೆ.
ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯ ಮುಂಭಾಗದಲ್ಲಿ ವಿಟ್ಲ ಕಡೆಯಿಂದ ಕೆಲಸ ಮುಗಿಸಿ ಅತೀ ವೇಗದಿಂದ ಮನೆಗೆ ಬರುತ್ತಿದ್ದ ಕಾರು ಮೆಲ್ಕಾರ್ ನಿಂದ ಉಪವಾಸ ಬಿಡಲು ಮನೆಗೆ ತೆರಳುತ್ತಿದ್ದ ಹೋಟೆಲ್ ಕಾರ್ಮಿಕರ ದ್ವಿಚಕ್ರ ವಾಹನ ಕ್ಕೆ ನೇರವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ಪರಿಣಾಮ ದ್ವಿಚಕ್ರ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಎರಡು ಸ್ಕೂಟರನಲ್ಲಿ ಸವಾರಿ ಮಾಡುತ್ತಿದ್ದ ಸವಾರರಿಗೆ ಗಾಯಗೊಂಡಿದೆ.

Leave a Reply

Your email address will not be published. Required fields are marked *

error: Content is protected !!