August 21, 2026

ಮಂಗಳೂರು: ಕರ್ಕಶ ಹಾರ್ನ್ ತೆರವು ಕಾರ್ಯಚರಣೆ: 77 ಸಾವಿರ ರೂ. ದಂಡ ಸಂಗ್ರಹ

0
car-horn-2.jpg

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿನ್ನೆ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಕರ್ಕಶ ಹಾರ್ನ್ ತೆರವು ನಡೆಸಿ 77 ಸಾವಿರ ರೂ. ದಂಡ ವಿಧಿಸಿದ್ದಾರೆ.

ಪೊಲೀಸ್ ಆಯುಕ್ತ ಎನ್. ಶಶಿಕುಮಾರ್‌ರ ಸೂಚನೆಯ ಮೇರೆಗೆ ಸಂಚಾರ ಉತ್ತರ, ಸಂಚಾರ ದಕ್ಷಿಣ, ಸಂಚಾರ ಪೂರ್ವ ಠಾಣೆಗಳ ವ್ಯಾಪ್ತಿಗಳಲ್ಲಿ ಕರ್ಕಶ ಹಾರ್ನ್ ತೆರವು ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಇದರಲ್ಲಿ ಒಟ್ಟು 154 ಪ್ರಕರಣಗಳನ್ನು ದಾಖಲಿಸಿ ಹಾರ್ನ್‌ಗಳನ್ನು ತೆರವುಗೊಳಿಸಿದ್ದಾರೆ. 77 ಸಾವಿರ ರೂ. ದಂಡ ವಿಧಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!