March 19, 2026

ಉಡುಪಿ: ಎಟಿಎಂ ನಿಂದ ಹಣ ಕಳವು ಯತ್ನ ಪ್ರಕರಣ: ಓರ್ವನ ಬಂಧನ

0
Screenshot_20220408-103237_Chrome.jpg

ಉಡುಪಿ: ಮಧ್ಯರಾತ್ರಿಯಲ್ಲಿ ಉಡುಪಿಯ ಅಂಬಾಗಿಲು ಪೆರಂಪಳ್ಳಿ ಕ್ರಾಸ್‌ನ ಕೆನರಾ ಬ್ಯಾಂಕ್‌ ಎಟಿಎಂನಲ್ಲಿರುವ ಹಣ ಕಳವು ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ವಿಜಯನಗರ ಜಿಲ್ಲೆಯ ಬೆಣ್ಣೆಕಲ್ಲು, ಹಗರಿಬೊಮ್ಮನಹಳ್ಳಿ ತಾಲೂಕು ನಿವಾಸಿ ಹನುಮಂತ (19) ಬಂಧಿತ ಆರೋಪಿ.

ಮಾ. 7 ಹಾಗೂ ಮಾ.8 ರ ಮಧ್ಯರಾತ್ರಿ ಉಡುಪಿಯ ಅಂಬಾಗಿಲು ಪೆರಂಪಳ್ಳಿ ಕ್ರಾಸ್‌ನ ಕೆನರಾ ಬ್ಯಾಂಕ್‌ ಎಟಿಎಂ ನಲ್ಲಿರುವ ಹಣ ಕಳವು ಮಾಡುವ ಉದ್ದೇಶದಿಂದ ಎಟಿಎಂ ಲಾಕರ್‌ ಡೋರ್‌ನ್ನು ಮುರಿದು ಕಳವು ಮಾಡಲು ಪ್ರಯತ್ನಿಸಿದ ಘಟನೆ ಬೆಳಕಿಗೆ ಬಂದಿತ್ತು.

ಘಟನೆಯ ಬಗ್ಗೆ ಎಲೆಕ್ಟ್ರಾನಿಕ್ ಪೇಮೆಂಟ್ ಸರ್ವೀಸ್ ಲಿಮಿಟೆಡ್‌ ಕಂಪೆನಿಯಲ್ಲಿ ಜನರಲ್ ಮ್ಯಾನೇಜರ್ ಉಡುಪಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿಗೆ ಹೋಗಿ ಆರೋಪಿಯನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಧೀಶರು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ಪೊಲೀಸ್‌ ಅಧೀಕ್ಷಕ ಎನ್‌. ವಿಷ್ಣುವರ್ಧನ್‌, ಐ.ಪಿ.ಎಸ್‌, ಉಡುಪಿ ರವರ ಆದೇಶದಂತೆ, ಸಿದ್ದಲಿಂಗಪ್ಪ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ, ಸುಧಾಕರ ಸದಾನಂದ ನಾಯ್ಕ್, ಡಿವೈಎಸ್‌ಪಿ ಉಡುಪಿ ರವರ ಮಾರ್ಗದರ್ಶನದಲ್ಲಿ, ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ ಕುಮಾರ್ ಪಿ, ಪಿ.ಎಸ್‌.ಐ-1 ಮಹೇಶ್ ಟಿ.ಎಮ್, ಪಿ.ಎಸ್.ಐ-2 ವಾಸಪ್ಪ ನಾಯ್ಕ್, ಎಎಸ್‌ಐ ವಿಜಯ ಸಿ ಹಾಗೂ ಸಿಬ್ಬಂದಿಯವರಾದ, ಸತೀಶ, ಕಿರಣ್, ಸಂತೋಷ ರಾಠೋಡ್‌ ತನಿಖೆಯಲ್ಲಿ ಸಹಕರಿಸಿದ್ದರು.

Leave a Reply

Your email address will not be published. Required fields are marked *

error: Content is protected !!