February 3, 2026

ಮಂಗಳೂರು ವಿವಿ ಘಟಿಕೋತ್ಸವ: ಈ ಬಾರಿ ವಸ್ತ್ರಸಂಹಿತೆ ಕಡ್ಡಾಯ

0
image_editor_output_image-164238880-1649311050504.jpg

ಮಂಗಳೂರು: ಮಂಗಳೂರು ವಿ.ವಿ. ಘಟಿಕೋತ್ಸವ ಸಂದರ್ಭ ರಾಜ್ಯ ಪಾಲರಿಂದ ಪದವಿ ಸ್ವೀಕರಿಸುವ ವಿದ್ಯಾರ್ಥಿಗಳು ಈ ಬಾರಿ ಕಡ್ಡಾಯವಾಗಿ “ವಸ್ತ್ರ ಸಂಹಿತೆ’ ಪಾಲಿಸಬೇಕು; ಇಲ್ಲ ವಾದರೆ ವೇದಿಕೆಯ ಮೇಲೆ ಪದವಿ ಸ್ವೀಕರಿಸಲು ಅನುಮತಿ ಇಲ್ಲ!

ವಿ.ವಿ.ಯ 40ನೇ ವಾರ್ಷಿಕ ಘಟಿಕೋತ್ಸವ ಎ. 23ರ ಬೆಳಗ್ಗೆ 11ಕ್ಕೆ ಮಂಗಳಗಂಗೋತ್ರಿಯಲ್ಲಿ ನಡೆಯಲಿದೆ. ಈ ವೇಳೆ ಪದವಿ ಪಡೆಯು ವವರು ಪೂರ್ಣ ಬಿಳಿ ಬಣ್ಣದ ಉಡುಗೆ ಧರಿಸಿರಬೇಕು.

ನಿಯಮ ಪಾಲಿಸದಿದ್ದರೆ ವೇದಿ ಕೆಯಲ್ಲಿ ಸರ್ಟಿಫಿಕೇಟ್‌ ಸಿಗದು. ಅವರು ಕಾರ್ಯಕ್ರಮ ಮುಗಿದ ಬಳಿಕ ಸರ್ಟಿಫಿಕೇಟ್‌ ಪಡೆಯಬೇಕಾಗುತ್ತದೆ.

ಘಟಿಕೋತ್ಸವದಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳು ಸಮವಸ್ತ್ರ ನಿಯಮ ಪಾಲಿಸು ವಂತೆ ನಿರ್ದೇಶನ ಈ ಹಿಂದೆಯೇ ಇತ್ತು. ಆದರೂ ಕೆಲವು ವಿದ್ಯಾರ್ಥಿಗಳು ಬಣ್ಣ ಬಣ್ಣದ ಬಟ್ಟೆ ಧರಿಸಿ ಬಂದು ಪದವಿ ಪಡೆದದ್ದಿದೆ. ಇದು ವಿ.ವಿ.ಯ ಶೈಕ್ಷಣಿಕ ಶಿಸ್ತಿಗೆ ವಿರುದ್ಧವಾದದ್ದು ಎಂದು ವಸ್ತ್ರಸಂಹಿತೆ ಕಡ್ಡಾಯ ಪಾಲನೆಗೆ ಈ ಬಾರಿ ನಿರ್ಧರಿಸಲಾಗಿದೆ.

ವಿದ್ಯಾರ್ಥಿಗಳು ದಾಖಲಾತಿ ಪಡೆಯುವ ಸಂದರ್ಭ ಈ ಸೂಚನೆಯನ್ನು ಮಂಗಳೂರು ವಿ.ವಿ. ನೀಡಲಿದೆ ಎಂದು ಮಂಗಳೂರು ವಿ.ವಿ. ಕುಲಸಚಿವ (ಪರೀಕ್ಷಾಂಗ) ಪ್ರೊ| ಪಿ.ಎಲ್‌. ಧರ್ಮ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!