February 3, 2026

ಪುತ್ತೂರು ತಾಲೂಕು ವಕೀಲರ ಸಂಘದ ಕೋಶಾಧಿಕಾರಿಯಾಗಿ ಶ್ಯಾಮ್ ಪ್ರಸಾದ್ ಆಯ್ಕೆ

0
image_editor_output_image-634072519-1649310654337.jpg

ಪುತ್ತೂರು: ತಾಲೂಕು ವಕೀಲರ ಸಂಘದ 2022-24 ನೇ ಸಾಲಿನ ಕೋಶಾಧಿಕಾರಿಯಾಗಿ ಹಿರಿಯ ವಕೀಲ ಶ್ಯಾಮ್ ಪ್ರಸಾದ್ ಕೈಲಾರ್ ಆಯ್ಕೆಯಾಗಿದ್ದಾರೆ.

ಎ. 4 ರಂದು ನಡೆದ ಪುತ್ತೂರು ವಕೀಲರ ಸಂಘದ ಕಛೇರಿಯಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು.

ಮಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿಯ ಸದಸ್ಯರಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದರು, ಇವರು ಪ್ರಸ್ತುತ ಪುತ್ತೂರಿನಲ್ಲಿ ಚಾಣಕ್ಯ ಲಾ ಚೇಂಬರ್ಸ್ ಎಂಬ ಹೆಸರಿನ ಕಚೇರಿಯನ್ನು ಹೊಂದಿದ್ದು, ಕಳೆದ ಹನ್ನೆರಡು ವರ್ಷಗಳಿಂದ ಹಿರಿಯ ನ್ಯಾಯವಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ಸಂಘ- ಸಂಸ್ಥೆಗಳ ಕಾನೂನು ಮಾಹಿತಿ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ಇಳಂತಿಲ ಗ್ರಾಮದ ಕೈಲಾರು ಬಾಲಕೃಷ್ಣ
ಮತ್ತು ದೇವಕಿ ದಂಪತಿಗಳ ಪುತ್ರ.

Leave a Reply

Your email address will not be published. Required fields are marked *

You may have missed

error: Content is protected !!