March 23, 2026

ಕೃಷ್ಣಾಪುರ: ಮಕ್ಕಳೊಂದಿಗೆ ತಾಯಿ ನಾಪತ್ತೆ

0
image_editor_output_image-345237157-1649310422973.jpg

ಮಂಗಳೂರು: ಮೂವರು ಮಕ್ಕಳೊಂದಿಗೆ ಮಹಿಳೆಯೊಬ್ಬರು ನಾಪತ್ತೆಯಾಗಿದ್ದು, ಈ ಬಗ್ಗೆ ನಗರದ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೃಷ್ಣಾಪುರ ಪೆರ್ನೆತೋಟದ ಜುಮ್ಮಾ ಮಸೀದಿ ಬಳಿ ವಾಸವಿರುವ ಯು.ಕೆ.ಸಲೀಂ ಎಂಬವರ ಪತ್ನಿ ಜೀನತ್ (34) ಅವರ ಮಕ್ಕಳಾದ ಮೊಯ್ದೀನ್ ಅಬ್ದುಲ್ ಸಮದ್ (11), ನೆಬಿಸಾ ಸಫ್ನಾಜ್ (10) ಮತ್ತು ಮೊಹಮ್ಮದ್ ತೆಹನಾಜ್ (7) ನಾಪತ್ತೆಯಾದ್ದಾರೆ.

ದೂರಿನ ಪ್ರಕಾರ, ಜೀನತ್ ತನ್ನ ಮನೆಯಿಂದ ಮಾರ್ಚ್ 31 ರಂದು ಬೆಳಿಗ್ಗೆ 10 ಗಂಟೆಗೆ ಕೃಷ್ಣಾಪುರ ಬದ್ರಿಯಾ ಶಾಲೆಗೆ ಹೋಗಿ ತನ್ನ ಎಲ್ಲಾ ಮೂರು ಮಕ್ಕಳನ್ನು ಕರೆದುಕೊಂಡು ನಂತರ ನಾಪತ್ತೆಯಾಗಿದ್ದಾರೆ.

ಜೀನತ್ ಅವರ ಪತಿ ಸಲೀಂ ಅವರು ತಮ್ಮ ದೂರಿನಲ್ಲಿ, ಜೀನತ್ ಕಳೆದ ಎಂಟು ಒಂಬತ್ತು ತಿಂಗಳಿಂದ ಅನೈತಿಕ ಸಂಬಂಧ ಹೊಂದಿರುವ ನೆರೆಹೊರೆಯವರೊಂದಿಗೆ ಹೋಗಿರಬೇಕು ಎಂದು ಶಂಕಿಸಿದ್ದಾರೆ.

ಸುರತ್ಕಲ್ ಠಾಣೆಯ ಪೊಲೀಸರು ಸಾರ್ವಜನಿಕರು ಜೀನತ್ ಅವರನ್ನು ಎಲ್ಲಿಯಾದರೂ ಕಂಡಲ್ಲಿ 0824-2220540 ಗೆ ಸಂಪರ್ಕಿಸಲು ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!