ಲಾರಿ ಢಿಕ್ಕಿ: ಕಾನ್ಸ್‌ಟೇಬಲ್ ಸಹಿತ ಇಬ್ಬರು ಸ್ಥಳೀಯರು ಮೃತ್ಯು
ಹುಬ್ಬಳ್ಳಿ: ಮಳೆಯಿಂದಾಗಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರದ ಟೊಂಗೆಯನ್ನು ತೆರವುಗೊಳಿಸುತ್ತಿದ್ದ ಪೊಲೀಸರು ಹಾಗೂ ಸಾರ್ವಜನಿಕರಿಗೆ ಲಾರಿ ಡಿಕ್ಕಿ ಹೊಡೆದಿದ್ದರಿಂದ, ಕಾನ್ಸ್‌ಟೇಬಲ್ ಹಾಗೂ ಇಬ್ಬರು ಸ್ಥಳೀಯರು ಮೃತಪಟ್ಟಿದ್ದಾರೆ.
ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಅಂಚಟಗೇರಿ ಮತ್ತು ಚಳಮಟ್ಟಿ ಕ್ರಾಸ್ ಮಾರ್ಗದ ಮಧ್ಯೆ ರಾತ್ರಿ 9.45ರ ಸುಮಾರಿಗೆ ಘಟನೆ ನಡೆದಿದೆ.
ಕಲಘಟಗಿ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಪಂಡಿತ ಕಾಸರ್ (28), ಗಂಗೀವಾಳ ಗ್ರಾಮದ ಶಿವಲಿಂಗಪ್ಪ ಕಲಬುರ್ಗಿ ಹಾಗೂ ಹನುಮಂತಪ್ಪ ಕಲಬುರ್ಗಿ ಮೃತರು. ಕಾನ್ಸ್‌ಟೇಬಲ್ ಗಳಾದ ನೇತಾಜಿ ಎಸ್. ವಾಘ್, ಶಂಕರ ಬೇವಿನಮರದ, ಸ್ಥಳೀಯರಾದ ರವಿ ವಾಲಿಕರ, ಸಿದ್ದಪ್ಪ ಗುಡ್ಡಪ್ಪನವರ ಗಾಯಗೊಂಡಿದ್ದು ಎಲ್ಲರನ್ನು ಕಿಮ್ಸ್ ಗೆ ದಾಖಲಿಸಲಾಗಿದೆ.




