ಮೂಡುಬಿದಿರೆ: ಬೈಕ್‌ಗಳೆರಡು ಮುಖಾಮುಖಿ ಢಿಕ್ಕಿ: ಹೊಸಂಗಡಿ ನಿವಾಸಿ ಮೃತ್ಯು
ಮೂಡುಬಿದಿರೆ: ಬೈಕ್‌ಗಳೆರಡು ಮುಖಾಮುಖಿ ಢಿಕ್ಕಿಯಾದ ಪರಿಣಾಮವಾಗಿ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ಕೊಡಂಗಲ್ಲು ಬಳಿ ಇಂದು ನಡೆದಿದೆ.
ಹೊಸಂಗಡಿ ಬಳಿಯ ಎದುರುಗುಡ್ಡೆ ನಿವಾಸಿ, ಪೊರಟ ವ್ಯಾಪಾರಿ ರವೀಂದ್ರ (36ವ) ಮೃತಪಟ್ಟ ವ್ಯಕ್ತಿ.
ಸಹೋದರ ರಾಜೇಂದ್ರ ಅವರಿಗೆ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮೂಡುಬಿದಿರೆ ಪೊಲೀಸರು ಬೈಕ್ ಸವಾರ, ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ಮೃತ ರವೀಂದ್ರ ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.





