ವಿಟ್ಲ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್:
ವಿಟ್ಲ ಪೊಲೀಸರ ದಾಳಿ; ಮೂವರು ಆರೋಪಿಗಳು ಮತ್ತು ಸ್ವತ್ತುಗಳು ವಶಕ್ಕೆ
ವಿಟ್ಲ: ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ನಿರತರಾಗಿದ್ದ ಸ್ಥಳಕ್ಕೆ ದಾಳಿ ನಡೆಸಿದ ವಿಟ್ಲ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಕೊಳ್ನಾಡು ಗ್ರಾಮದ ಕುದ್ರಿಯ ಎಂಬಲ್ಲಿ ನಡೆದಿದೆ.
ಸ್ಥಳೀಯ ನಿವಾಸಿಗಳಾದ ಕರುಣಾಕರ, ಶರತ್‌ಕುಮಾರ ಮತ್ತು ಅವಿನಾಶ್ ಬಂಧಿತ ಆರೋಪಿಗಳು.
ಕೊಳ್ನಾಡು ಗ್ರಾಮದ ಕುದ್ರಿಯಾ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಐಪಿಎಲ್ ಕ್ರಿಕೆಟ್ ಪಂದ್ಯಾಟಕ್ಕೆ ಬೆಟ್ಟಿಂಗ್ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ಇನ್ ಸ್ಪೆಕ್ಟರ್ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ವಿಟ್ಲ ಎಸೈ ಸಂದೀಪ್ ಕುಮಾರ್ ಮತ್ತು ತಂಡ ದಾಳಿ ನಡೆಸಿದೆ. ಈ ಸಂದರ್ಭ ಮೂವರು ಆರೋಪಿಗಳು ಕೈಯಲ್ಲಿ ಮೊಬೈಲ್ ಫೋನುಗಳನ್ನು ಹಿಡಿದುಕೊಂಡು ಅದರಲ್ಲಿ ಮಾತನಾಡಿಕೊಂಡು ಲ್ಯಾಪ್‌ಟ್ಯಾಪ್ ಮುಖಾಂತರ ಕ್ರಿಕೆಟ್ ಪಂದ್ಯಾಟವನ್ನು ನೋಡುತ್ತಿದ್ದರು. ಅವರನ್ನು ಸ್ಥಳದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಲಕ್ನೋ ಹಾಗೂ ಹೈದರಬಾದ್ ತಂಡಗಳ ನಡುವೆ ನಡೆಯುತ್ತಿರುವ ಕ್ರಿಕೆಟ್‌ಪಂದ್ಯಾಟಕ್ಕೆ ತಾವು ಬೆಟ್ಟಿಂಗ್ ನಡೆಸುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಸ್ಥಳದಲ್ಲಿ ಇದ್ದ ಕ್ರಿಕೆಟ್ ಪಂದ್ಯಾಟವನ್ನು ವೀಕ್ಷಿಸುತ್ತಿದ್ದ LENOVO ಕಂಪೆನಿಯ ಲ್ಯಾಪ್‌ಟ್ಯಾಪ್, ರೂಪಾಯಿ 2000 ಮುಖಬೆಲೆಯ 6 ನೋಟುಗಳು, 500 ರೂಪಾಯಿ ಮುಖಬೆಲೆಯ 5 ನೋಟುಗಳು, LAVA ಕಂಪೆನಿಯ ಕೀಪ್ಯಾಡ್‌ಮೊಬೈಲ್ -3 ಇದ್ದು, SAMSUNG ಕಂಪೆನಿಯ ಮೊಬೈಲ್-3, NOKIA ಕಂಪೆನಿಯ ಕೀಪ್ಯಾಡ್ ಮೋಬೈಲ್-1, JIO ಕಂಪೆನಿಯ ಕೀಪ್ಯಾಡ್ ಮೋಬೈಲ್-1, Apple ಕಂಪೆನಿಯ ಮೊಬೈಲ್ -1, Redmi ಕಂಪೆನಿಯ ಮೊಬೈಲ್ -2, ಅನ್ನು ವಶಕ್ಕೆ ಪಡೆಯಲಾಗಿದೆ.






