March 19, 2026

ರಾಜಸ್ಥಾನದ ಕರೌಲಿ ನಗರದಲ್ಲಿ ನಡೆದ ಕೋಮು ಸಂಘರ್ಷ: ಪೊಲೀಸ್ ಪೇದೆಯ ಸಾಹಸ ವೈರಲ್

0
image_editor_output_image1456174434-1649140682655.jpg

ಜೈಪುರ: ಕಳೆದ ಶನಿವಾರ ಯುಗಾದಿ ಹಬ್ಬದ ವೇಳೆ ರಾಜಸ್ಥಾನದ ಕರೌಲಿ ನಗರದಲ್ಲಿ ನಡೆದ ಕೋಮು ಸಂಘರ್ಷದಲ್ಲಿ ಪೊಲೀಸ್ ಪೇದೆಯೊಬ್ಬರು ತೋರಿಸಿದ ಸಾಹಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಕರೌಲಿ ನಗರದಲ್ಲಿ ಯುಗಾದಿ ಪ್ರಯುಕ್ತ ಕೆಲ ಹಿಂದೂ ಸಂಘಟನೆಗಳ ಯುವಕರು ಬೈಕ್ ರ‍್ಯಾಲಿ ಆಯೋಜಿಸಿದಇಟ್ಟಿದ್ದರು.

ಬೆಂಕಿಯ ಕೆನ್ನಾಲಿಗೆ ಅನೇಕ ಮನೆಗಳಿಗೆ ವ್ಯಾಪಿಸಿದ್ದರಿಂದ ಜನ ತೊಂದರೆಗೆ ಸಿಲುಕಿದ್ದರು. ಈ ವೇಳೆ ಗುಡಿಸಲಿನಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕುವ ಆತಂಕದಲ್ಲಿದ್ದ 3 ವರ್ಷದ ಹೆಣ್ಣು ಮಗುವನ್ನು ಪೊಲೀಸ್ ಕಾನ್ಸ್‌ಟೇಬಲ್ ನೇತ್ರೇಶ್ ಶರ್ಮಾ ಅವರು ಕಾಪಾಡಿದ್ದರು. ಅವರು ಗುಡಿಸಲೊಳಗೆ ನುಗ್ಗಿ ಮಗುವನ್ನು ಎತ್ತಿಕೊಂಡು ಓಡಿ ಬಂದಿದ್ದರು.

ನೇತ್ರೇಶ್ ಶರ್ಮಾ ಅವರ ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಶರ್ಮಾ ಅವರ ಸಾಹಸ ಹಾಗೂ ಮಾನವೀಯತೆಯನ್ನು ಅನೇಕ ಜನ ಕೊಂಡಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!