ಶ್ರೀಲಂಕಾದಲ್ಲಿ 1 ಕೆಜಿ ಹಾಲು ಪುಡಿಗೆ 1,900 ರೂ.: ದಿನಬಳಕೆಯ ವಸ್ತುಗಳ ಬೆಲೆ ಎಷ್ಟೆಷ್ಟು ಗೊತ್ತೇ?
ಶ್ರೀಲಂಕಾ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದ್ವೀಪರಾಷ್ಟ್ರವಾದ ಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಬೆನ್ನಲ್ಲೇ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನರು ಪರದಾಡುವಂತಾಗಿದೆ ಎಂದು ವರದಿ ವಿವರಿಸಿದೆ.
ಶ್ರೀಲಂಕಾದಲ್ಲಿ ಒಂದು ಕೆಜಿ ಅಕ್ಕಿ ಬೆಲೆ 220 ರೂಪಾಯಿ, ಒಂದು ಕೆಜಿ ಗೋಧಿ ಬೆಲೆ 190 ರೂಪಾಯಿ. ಅದೇ ರೀತಿ ಸಕ್ಕರೆ ಮತ್ತು ತೆಂಗಿನ ಎಣ್ಣೆ ಬೆಲೆ ಜನ ಸಾಮಾನ್ಯರನ್ನು ಕಂಗೆಡಿಸಿದೆ. ಒಂದು ಕೆಜಿ ಸಕ್ಕರೆ ಬೆಲೆ 240 ರೂಪಾಯಿ, ಒಂದು ಲೀಟರ್ ತೆಂಗಿನ ಎಣ್ಣ ಬೆಲೆ 850 ರೂಪಾಯಿ. ಒಂದು ಕೆಜಿ ಹಾಲು ಪುಡಿಯನ್ನು 1,900 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.





