ಚಿಕ್ಕಮಗಳೂರು: ಹಣಕಾಸಿನ ವ್ಯವಹಾರ ವಿಚಾರಕ್ಕೆ ಜಗಳ: ಓರ್ವನ ಕೊಲೆಯಲ್ಲಿ ಅಂತ್ಯ
ಚಿಕ್ಕಮಗಳೂರು: ಯುವಕರ ನಡುವೆ ಹಣಕಾಸಿನ ವ್ಯವಹಾರ ವಿಚಾರಕ್ಕೆ ಜಗಳ ನಡೆದು ಆ ಬಳಿಕ ಕೊಲೆಯಲ್ಲಿ ಅಂತ್ಯವಾದ ಘಟನೆ ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯಲ್ಲಿ ಸೋಮವಾರ ನಡೆದಿದೆ.
ಗವನಹಳ್ಳಿಯ ದ್ರುವರಾಜ್ ಅರಸ್ (26) ಕೊಲೆಯಾದ ಯುವಕ.
ದ್ರುವ ರಾಜ್ ಹಾಗೂ ಪ್ರಮೋದ್ ಇಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ಜಗಳವುಂಟಾಗಿದ್ದು, ದ್ರುವ ರಾಜ್‍ಗೆ, ಪ್ರಮೋದ್ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.




